ಪುತ್ತೂರು: ವಿಜ್ಞಾನ ಬೇರೆ ಅಲ್ಲ ತತ್ವಜ್ಞಾನ ಬೇರೆ ಅಲ.್ಲ ಅನೇಕ ವಿಜ್ಞಾನಿಗಳು ತತ್ವಜ್ಞಾನವನ್ನು ಅರಿತು ಅದರಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯೋಗಾಲದಲ್ಲಿ ಒಪ್ಪಲಾದ ಸಂಗತಿಗಳನ್ನು ಮಾತ್ರ ವಿಜ್ಞಾನ ಎಂದು ಹೇಳುವ ಪದ್ಧತಿ ಬೆಳೆದಿದೆ. ಈ ಬೆಳವಣಿಗೆ ವಿಜ್ಞಾನ ಮತ್ತು ತತ್ವಜ್ಞಾನದ ಮಧ್ಯೆ ತಡೆಗೋಡೆಯಂತೆ ನಿಂತಿದೆ. ಆದ್ದರಿಂದ ವಿಜ್ಞಾನದಲ್ಲಿ ಆಸಕ್ತಿ ಇರುವವರು ಪರಿಶುದ್ಧವಾದ ಮೂಲ ವಿಜ್ಞಾನದ ಜತೆಗೆ ತತ್ವಜ್ಞಾನವನ್ನೂ ಪ್ರೀತಿಸಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಡೆಕ್ಕಿಲ ಶ್ರೀಧರ್ ಭಟ್ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿಲಾದ ಶ್ರೀ ಉಮಾಮಹೇಶ್ವರ ದೇವರು ಪಡಾರು ದತ್ತಿನಿದಿ, ದಿ. ಬಡೆಕ್ಕಿಲ ಸೀತಾರಾಮ ಭಟ್ ಮತ್ತು ಲಕ್ಷಿ್ಮೀ ಅಮ್ಮ ದತ್ತಿನಿಧಿ ಮತ್ತು ದಿ.ಪಡಿಲ್ ಶಂಕರ್ ಭಟ್ ದತ್ತಿನಿಧಿ ಬಹುಮಾನ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮುಖ್ಯ ಮಾತನಾಡಿದರು.
ಮೂಲ ವಿಜ್ಞಾನ ಪರಿಶುದ್ಧವಾಗಿದೆ. ಆದರೆ ಮೂಲ ವಿಜ್ಞಾನಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರ್ ಕ್ಷೇತ್ರಕ್ಕೆ ಬಗೆಗೆ ವಿದ್ಯಾರ್ಥಿಗಳು ಆಸಕ್ತಿಯನ್ನು ತೋರುತ್ತಿದ್ದಾರೆ. ಆದ್ದರಿಂದ ಮೂಲ ವಿಜ್ಞಾನದಲ್ಲಿ ತಮ್ಮ ಉನ್ನತ ವಿದ್ಯಾಭಾಸ್ಯವನ್ನು ಮಾಡಲು ಇಚ್ಛಿಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದತ್ತಿನಿಧಿ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದರಲ್ಲದೆ ಓದುವ ಹವ್ಯಾಸದಿಂದ ವಿಜ್ಷಾನದ ವಿಕಾಸವಾಗುತ್ತದೆ. ಪರೀಕ್ಷೆಯ ಹೊರತಾಗಿಯೂ ಪುಸ್ತಕಗಳನ್ನು ಓದಬೇಕು. ಗ್ರಂಥಾಲಯಗಳನ್ನು ಅತಿ ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅನೇಕ ವಿಜ್ಞಾನಿಗಳ ಸಂಶೋಧನೆಯ ಫಲ ವಿಶ್ವದ ಜನರಿಗೆಲ್ಲ ಸಿಗುತ್ತದೆ. ವಿಶ್ವದ ಜನರ ಸಬಲೀಕರಣಕ್ಕಾಗಿ ಸಂಶೋಧನೆ ಸಹಕಾರಿ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಪ್ರಯೋಜನದ ಜೊತೆಗೆ ಸಮಾಜ ಮುಖಿ ಕಾರ್ಯವನ್ನು ಮಾಡುವ ಮೂಲಕ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ.ಜಯರಾಮ್ ಭಟ್ ಮಾತನಾಡಿ ನಮ್ಮ ಪೂರ್ವಜರು ವಿಜ್ಙಾನ ಕ್ಷೇತ್ರದಲ್ಲಿ ಮಾಡಿರುವ ಅನೇಕ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.
ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರಸ್ತುತ ಜನರನ್ನು ಕಾಡುತ್ತಿರುವ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ. ಆದ್ದರಿಂದ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನದ ರೂಪದಲ್ಲಿ ದತ್ತಿನಿಧಿಯನ್ನು ಸರಿಯಾಗಿ ಬಳಸಿಕೊಂಡು ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದತ್ತಿನಿಧಿ ಸಂಸ್ಥಾಪಕರ ಕುಟುಂಬದವರಾದ ಶ್ರೀಕಾಂತ್ ಭಟ್, ವಿಜ್ಞಾನ ಸಂಘದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ನೀಡಲಾಯಿತು.
ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ರಶ್ಮಿತಾ.ಎಂ ಸ್ವಾಗತಿಸಿ, ಇಲೆಕ್ಟ್ರಾನಿಕ್ಸ್ ಉಪನ್ಯಾಸಕಿ ಸ್ವರ್ಣಲಕ್ಷಿ್ಮ ವಂದಿಸಿದರು, ಭೌತಶಾಸ್ತ್ರದ ಉಪನ್ಯಾಸ ದೀಕ್ಷಿತ್ ಕೆ.ಟಿ. ಕಾರ್ಯಕ್ರಮವನ್ನು ನಿರೂಪಿಸಿದರು.