Thursday, January 23, 2025
ಸುದ್ದಿ

ಸುಬ್ರಹ್ಮಣ್ಯದಲ್ಲಿ ಬಿಎಸ್ಸೆಎನ್‌ಎಲ್ ಸಿಗ್ನಲ್ ಮಾಯ: ಮಾ.29 ಕ್ಕೆ ಚೆಂಬು ಹಿಡಿದು ಭಿಕ್ಷಾಟನೆ ಪ್ರತಿಭಟನೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸರಕಾರಿ ಸಾಮ್ಯದ ಬಿಎಸ್ಸೆಎನ್‌ಎಲ್ ಸೇವಾ ಸಂಸ್ಥೆ ನಷ್ಟಕ್ಕೆ ಒಳಗಾದ ಕಾರಣ ಇದರ ಸೇವೆ ಗ್ರಾಹಕರಿಗೆ ಸಿಗುತಿಲ್ಲ. ಗ್ರಾಮೀಣ ಭಾಗದಲ್ಲಿ ಮೊಬೈಲ್ ಟವರುಗಳಲ್ಲಿ ಸಿಗ್ನಲ್ ಮಾಯವಾಗುತ್ತಿದೆ. ಕರೆಂಟು ಹೋದಾಗ ಡೀಸೆಲ್ ತುಂಬಿಸಿ ಜನರೇಟರ್ ಹಾಕುವ ಎಂದರೆ ಡೀಸೆಲ್ ಕೂಡ ಇಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಮೊಬೈಲ್ ಸೇವೆ ಸಂಪೂರ್ಣ ನೆಲಕಚ್ಚಿದೆ. ಇದಕ್ಕೆ ಬೇಸತ್ತ ಗ್ರಾಮೀಣ ಭಾಗದ ಗ್ರಾಹಕರು ಸಾರ್ವಜನಿಕರಿಂದಲೇ ಭಿಕ್ಷೆ ಎತ್ತಿ ಇಲಾಖೆಗೆ ಮುಜುಗರ ತರಲು ಮುಂದಾಗಿದೆ.

ಬಿಎಸ್ಸೆಎನ್‌ಎಲ್ ಅವ್ಯವಸ್ಥೆ ವಿರುದ್ಧ ಮಾ.29 ರಂದು ಸುಬ್ರಹ್ಮಣ್ಯ ನಗರದಲ್ಲಿ ಭಿಕ್ಷಾಟನೆ ಮತ್ತು ಮೆಸ್ಕಾಂ ಸೇವೆಯಲ್ಲಿನ ವೈಪಲ್ಯ ಖಂಡಿಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಬ್ರಹ್ಮಣ್ಯ ಗ್ರಾ.ಪಂ ರಾಜೀವ್ ಗಾಂಧಿ ಸೇವಾ ಭವನದಲ್ಲಿ ನಡೆದ ಕೃಷಿಕರ ಬಳಕೆದಾರರ ಪೂರ್ವಭಾವಿ ಸಭೆ ನಿರ್ಧರಿಸಿದೆ. ಸಭೆಯಲ್ಲಿ ಎರಡೂ ಇಲಾಖೆಗಳಿಗೆ ಸುಧಾರಿಸಿಕೊಳ್ಳಲು ಒಂದು ವಾರದ ಗಡುವು ವಿಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.29 ರಂದು ನಗರದ ರಥಬೀದಿ ಹಾಗೂ ನಗರದಲ್ಲಿ ನಡೆಯುವ ವಿನೂತನ ಚೊಂಬು ಹಿಡಿದು ನಡೆಸುವ ಭಿಕ್ಷಾಟನೆ ಮತ್ತು ಮೆಸ್ಕಾಂ ಕಚೇರಿ ಎದುರಿನ ಪ್ರತಿಭಟನೆಗೆ ಪೂರ್ವಭಾವಿಯಾಗಿ ಸುಬ್ರಹ್ಮಣ್ಯ ಸಹಿತ ಸುತ್ತಮುತ್ತಲ ಗಂಭೀರ ಸಮಸ್ಯೆಗಳಿರುವ ಗ್ರಾಮಗಳಲ್ಲಿ ಕರಪತ್ರ ಹಂಚಿ ಪ್ರಚಾರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಹಿಳೆಯರು ಸಹಿತ ಭಾರಿ ಪ್ರಮಾಣದಲ್ಲಿ ಕ್ರಷಿಕರು. ಬಳಕೆದಾರರು. ವಿದ್ಯಾರ್ಥಿಗಳನ್ನು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರಚಾರ ಪಡಿಸಲು ತೀರ್ಮಾನಿಸಲಾಗಿದೆ.

ತಾರತಮ್ಯಕ್ಕೆ ಆಕ್ರೋಶ
ಮೆಸ್ಕಾಂ ಮತ್ತು ಬಿಎಸ್ ಎನ್ ಎಲ್ ಸೇವೆ ನಗರದಲ್ಲಿ ಉತ್ತಮವಾಗಿದ್ದು ಗ್ರಾಮೀಣ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷದ ಪರಮಾವಧಿ ಎಂದು ಸಭೆಯಲ್ಲಿದ್ದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಅಶೋಕ್ ನೆಕ್ರಾಜೆ.ರಾಜೇಶ್ ಎನ್ ಎಸ್.ಹರೀಶ ಇಂಜಾಡಿ.ರವೀಂದ್ರಕುಮಾರ್ ರುದ್ರಪಾದ.ಉದಯಕುಮಾರ್ ಬಳ್ಪ.ನಿತಿನ್ ಭಟ್ ನೂಚಿಲ.ದಿನೇಶ್ ಎಂ ಎಸ್ ಕಾರ್ಳಪ್ಪಾಡಿ.ಬಾಲಸುಬ್ರಹ್ಮಣ್ಯ ಹರಿಹರ.ಜಯಪ್ರಕಾಶ ಕಲ್ಲೇರಿಕಟ್ಟ ಮೊದಲಾದವರು ಉಪಸ್ಥಿತರಿದ್ದರು.