Wednesday, January 22, 2025
ಸುದ್ದಿ

ವಾರದ ಬಳಿಕ ಮೋದಿಗೆ ರಿಪ್ಲೈ ಮಾಡಿದ ಸಲ್ಲು – ಕಹಳೆ ನ್ಯೂಸ್

ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಒಂದೆಡೆಯಾದರೆ, ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಬೇಕೆಂಬ ಮಾತು ಇನ್ನೊಂದೆಡೆ ಕೇಳಿಬರುತ್ತಿದೆ. ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ಗೆ ವಾರದ ಬಳಿಕ ಸಲ್ಮಾನ್ ಖಾನ್ ರಿಪ್ಲೇ ಮಾಡಿದ್ದಾರೆ.

ಮಾ.13 ಕ್ಕೆ ಪ್ರಧಾನಿ ಮೋದಿ, ದೇಶದ ಯುವಕರು ಮತದಾನದತ್ತ ಬರಬೇಕಿದೆ. ಈ ನಿಟ್ಟಿನಲ್ಲಿ ನೀವು ಮತದಾನದ ಜಾಗೃತಿ ಮೂಡಿಸಬೇಕೆಂದು ಸಲ್ಮಾನ್ ಖಾನ್ ಹಾಗೂ ಅಮೀರ್‌ಗೆ ಟ್ಯಾಗ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ಯಾಗ್ ಮಾಡಿದ ಕೂಡಲೇ ಅಮೀರ್ ಖಾನ್ ಪ್ರತಿಕ್ರಿಯಿಸಿದ್ದರು. ಆದರೆ ಸಲ್ಲು ಬಾಯ್ ಬರೋಬ್ಬರಿ ಒಂದು ವಾರದ ಬಳಿಕ ಮೋದಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ದೇಶದಲ್ಲಿರುವ ನಮಗೆಲ್ಲ ವೋಟ್ ಮಾಡುವ ಅಧಿಕಾರವಿದ್ದು, ಅದನ್ನು ಚಲಾಯಿಸಬೇಕು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು