Wednesday, January 22, 2025
ಸುದ್ದಿ

ಶಿರ್ತಾಡಿಯಲ್ಲಿ ಮರಕ್ಕೆ ಕಾರು ಢಿಕ್ಕಿ: ತುಳು ಚಲನಚಿತ್ರ ನಿರ್ದೇಶಕ ಮೃತ್ಯು – ಕಹಳೆ ನ್ಯೂಸ್

ಮೂಡುಬಿದಿರೆ: ಮರಕ್ಕೆ ಕಾರು ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತುಳು ಚಲನಚಿತ್ರ ನಿರ್ದೇಶಕ ಮೃತಪಟ್ಟ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೊಣಾಜೆಯಲ್ಲಿ ನಿನ್ನೆ ಸಂಭವಿಸಿದೆ.

ಮೃತನನ್ನ ಕೊಣಾಜೆಕಲ್ಲು ನಿವಾಸಿ ಹ್ಯಾರಿಸ್ ಹೌದಾಲ್ ಎಂದು ಗುರುತಿಸಲಾಗಿದೆ. ಕಳೆದ ಹದಿನೈದು ದಿನಗಳಿಂದ ಮೂಡುಬಿದಿರೆ ಪರಿಸರದಲ್ಲಿ “ಆಟಿಡೊಂಜಿ ದಿನ” ತುಳು ಚಲನಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಅದರಂತೆ ನಿನ್ನೆ ಶೂಟಿಂಗ್ ಮುಗಿಸಿ ತನ್ನ ಕಾರಿನಲ್ಲಿ ನಿರ್ಮಾಪಕರನ್ನು ಶಿರ್ತಾಡಿಯಲ್ಲಿರುವ ರೂಮಿಗೆ ಬಿಟ್ಟು ಹಿಂತಿರುಗುವ ಸಂದರ್ಭ ಹ್ಯಾರಿಸ್ ಅವರ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು