Wednesday, January 22, 2025
ಸುದ್ದಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪೋಟೋ ವಾಟ್ಸಪ್ ಗ್ರೂಪಲ್ಲಿ ಹಾಕಿದ ಮುಖ್ಯ ಶಿಕ್ಷಕ ಅಮಾನತು – ಕಹಳೆ ನ್ಯೂಸ್

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದ್ದ ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಡಿಡಿಪಿಐ ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ. ಶಿರಾ ತಾಲ್ಲೂಕು ಬದನಕುಂಟೆಯ ಮಣ್ಣಮ್ಮ ಪ್ರೌಢಶಾಲೆಯ ಶಿಕ್ಷಕ ಎಸ್.ಕಾಂತರಾಜು ಅಮಾನತುಗೊಂಡವರು.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹೊಸೂರು ಪರೀಕ್ಷಾ ಕೇಂದ್ರದ ಪರಿಶೀಲನೆಗೆ ಸಿಟಿಂಗ್ ಸ್ಕ್ವಾಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಕಾಂತರಾಜು ಪರೀಕ್ಷೆ ಆರಂಭವಾಗುತ್ತಿದ್ದಂತೆ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಮನಿಸಿದವರು ಕೆಲ ಶಿಕ್ಷಕರು ತಕ್ಷಣ ಬಿಇಒ ಗಮನಕ್ಕೆ ತಂದಾಗ ಪ್ರಶ್ನೆ ಪತ್ರಿಕೆ ಪೋಟೋವನ್ನು ಡಿಲೀಟ್ ಮಾಡಿಸಿದ್ದರು. ಶಿಕ್ಷಕ ಕಾಂತರಾಜು ಹಾಗೂ ಈತನಿಗೆ ಸಹಕರಿಸಿದ್ದ ಮತ್ತೊಬ್ಬ ಶಿಕ್ಷಕ ಮಂಜುನಾಥ್ ಎಂಬುವರನ್ನು ಅಮಾನತುಗೊಳಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರವಿಶಂಕರ ರೆಡ್ಡಿ ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

63 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು: ತುರುವೇಕೆರೆ, ಮಾ.22- ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಲಲಿತವಾಗಿ ನಡೆಯಿತು. ನಿನ್ನೆ ಬೆಳಗ್ಗೆ 9.30ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.30 ರ ತನಕ ನಡೆಯಿತು. ಗುರುವಾರ ಅಮ್ಮಸಂದ್ರದ ಮೈಸೆಂಕೋ ಶಾಲಾ ಮಕ್ಕಳು ಪ್ರಥಮ ಭಾಷೆ ಇಂಗ್ಲೀಷ್ ಅನ್ನು ದಂಡಿನಶಿವರ ಮತ್ತು ಹುಲ್ಲೇಕೆರೆ ಪರೀಕ್ಷಾ ಕೇಂದ್ರಗಳಲ್ಲಿ ಬರೆದರೆ;. ಇನ್ನುಳಿದ ತಾಲ್ಲೂಕಿನ ಎಲ್ಲಾ ಶಾಲಾ ಮಕ್ಕಳು ಪ್ರಥಮಭಾಷೆ ಕನ್ನಡ ವಿಷಯವನ್ನು ಬರೆದರು.

ಈ ಬಾರಿ ತಾಲ್ಲೂಕಿನಲ್ಲಿ ಫೆಶಸ್ 1941 ಹಾಗೂ 206 ಪುನರಾವರ್ತಿ ವಿದ್ಯಾರ್ಥಿಗಳು ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಇದರಲ್ಲಿ 63 ವಿದ್ಯಾರ್ಥಿಗಳು ಮಾತ್ರ ಮೊದಲನೆಯ ದಿನದ ಪರೀಕ್ಷೆಗೆ ಗೈರಾಗಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುರುವೇಕೆರೆ ಜಿಲ್ಲೆಯಲ್ಲೇ ಉತ್ತಮ ಸ್ಥಾನ ಪಡೆಯುವಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿ ಎಂದು ಬಿಇಒ ರಂಗಧಾಮಯ್ಯ ತಿಳಿಸಿದ್ದಾರೆ.