Sunday, January 19, 2025
ಸುದ್ದಿ

ಹೊಸ ವಿಶ್ವ ದಾಖಲೆ ಬರೆದ ಭಾರತೀಯ ಸೇನೆ | ಭಾರತೀಯ ಸೇನೆಯ ಈ ಸಾಧನೆಗೆ ಅಭಿನಂದನೆಗಳ ಮಹಾಪೂರ

‌ಬೆಂಗಳೂರು : ಕ್ಯಾಪ್ಟನ್ ಬಿನ್ನಿ ಶರ್ಮಾ ತಂಡ ನೇತೃತ್ವದಲ್ಲಿ ನೆಡೆದ ಸಾಹಸದಲ್ಲಿ ಭಾರತೀಯ ವಾಯು ಸೇನೆಯ ಯೋಧರು ಹೊಸ ಧಾಖಲೆ ಬರೆದಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ. 58 ಯೋಧರು ಒಂದೇ ಬೈಕ್ ನಲ್ಲಿ ಪ್ರಯಾಣಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಆರ್ಮಿ ಸರ್ವೀಸ್‌ ಕೋರ್‌ ಟಾರ್ನಡೋಸ್‌ ತಂಡವು ಈ ದಾಖಲೆ ಮಾಡಿದೆ.
ಕ್ಯಾಪ್ಟನ್‌ ಬಿನ್ನಿ ಶರ್ಮಾ ನೇತೃತ್ವದ ತಂದವು ಸುಬೇದಾರ್‌ ರಾಮ್‌ಪಾಲ್‌ ತಯಾರಿಸಿದ್ದ ಬೈಕಿನಲ್ಲಿ ಪ್ರಯಾಣ ಮಾಡಿದ್ದರು. ಈ ಹಿಂದೆ ಒಂದೇ ಬೈಕ್ ನಲ್ಲಿ 54 ಮಂದಿ ಪ್ರಯಾಣಿಸಿರುವುದು ವಿಶ್ವ ದಾಖಲೆ ಎನಿಸಿತ್ತು. ಇದೀಗ ಭಾರತೀಯ ಯೋಧರು 58 ಮಂದಿ ಪ್ರಯಾಣಿಸುವ ಮೂಲಕ ಹಳೆ ದಾಖಲೆಯನ್ನು ಮುರಿದು ನೂತನ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response