Tuesday, January 21, 2025
ಸುದ್ದಿ

ಬಾಲಕಿ ನಾಪತ್ತೆ: ಅಸ್ಸಾಂನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 37/19 ಕಲಂ 363 ಐಪಿಸಿ ಪ್ರಕರಣದಲ್ಲಿ ಪುತ್ತೂರು ತಾಲೂಕು, ಕೆದಂಬಾಡಿ ಗ್ರಾಮ ಪಂಚಾಯತ್ ಕಟ್ಟಾತ್ತಾರು ಬಳಿಯಿರುವ ಪಿದಪಟ್ಲ ವಾಸಿಯಾದ ಭಾಸ್ಕರ ಪೂಜಾರಿರವರ ಪುತ್ರಿ ಕು.ಹೃತಿಕಾ(17) ರವರು ದಿ.08.03.2019 ರಂದು ನಾಪತ್ತೆಯಾಗಿದ್ದು ಸದ್ರಿ ವಿಷಯಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಠಾಣಾಧಿಕಾರಿಗಳಾದ ಪ್ರೊ.ಡಿವೈಎಸ್ ಪಿ ಶಿವಾನಂದ ಮದರಕಂಡಿರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಕ್ತಿವೇಲುರವರು ಹಾಗೂ ಇತರ ಸಿಬ್ಬಂದಿಯವರು ಬಾಲಕಿಯು ಅಸ್ಸಾಂನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಸ್ಸಾಂಗೆ ತೆರಳಿ ಬಾಲಕಿಯನ್ನು ದಿ.22.03.2019 ರಂದು ಠಾಣೆಗೆ ಕರೆತಂದಿರುತ್ತಾರೆ.ಮುಂದಿನ ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು