Recent Posts

Monday, January 20, 2025
ಸುದ್ದಿ

ಕೋಡಿಬೆಂಗ್ರೆಯಲ್ಲಿ ಮದ್ಯ-ಮಾಂಸ ಮುಕ್ತ ಮದರಂಗಿ – ಕಹಳೆ ನ್ಯೂಸ್

ಒಂದು ಬದಿ ಸಿಹಿನೀರಿನ ನದಿಗಳು ಇನ್ನೊಂದು ಬದಿ ಉಪ್ಪು ನೀರಿನ ಸಾಗರ, ಇವುಗಳ ಮಧ್ಯೆ ಇರುವ ಊರು ಕೋಡಿಬೆಂಗ್ರೆ. ಈ ಕೋಡಿಬೆಂಗ್ರೆ ಊರಿನಲ್ಲಿ 22 ವರ್ಷಗಳಿಂದ ತಂಬಾಕು ಸಂಬಂಧಿಸಿದ ಅಮಲು ಪದಾರ್ಥಗಳ ಮಾರಾಟವನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ, ಅಲ್ಲದೆ ಮದುವೆ ಹಿಂದಿನ ದಿನ ಮದರಂಗಿಯಂದು,
ಮದುವೆಗಿಂತಲೂ ಹೆಚ್ಚು ಖರ್ಚು ಮಾಡಿ ಡಿಜೆ-ಮದ್ಯಪಾನ ಮಾಡುವ ಈ ಕಾಲದಲ್ಲಿ, ಮಲ್ಪೆ ಸಮೀಪದ ಈ ಊರಿನಲ್ಲಿ ಮದರಂಗಿಯಂದು ಮಾಂಸದ ಊಟದ ಬದಲು ತರಕಾರಿ ಊಟವನ್ನೇ ಮಾಡುತ್ತಾರೆ.

ಮದ್ಯವನ್ನು ನೀಡದೆ ಯುವಕರು ದಾರಿ ತಪ್ಪುವುದನ್ನು ತಪ್ಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಯಾವುದೇ ಸರ್ಕಾರವಾಗಲಿ, ಸಂಘ ಸಂಸ್ಥೆಯಾಗಲಿ ಸಲಹೆ ಸೂಚನೆ ನೀಡಿದ್ದಲ್ಲ. ಬದಲಾಗಿ ಸ್ವತಃ ಗ್ರಾಮಸ್ಥರೇ ಒಗ್ಗಟ್ಟಾಗಿ ತೆಗೆದುಕೊಂಡ ತೀರ್ಮಾನ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು