Saturday, November 23, 2024
ಸಿನಿಮಾಸುದ್ದಿ

‘ಕೇಸರಿ’ ಧಮಾಕ: ಮೊದಲ ದಿನವೇ ದಾಖಲೆ ಗಳಿಕೆ ಕಂಡ ಅಕ್ಷಯ್ ಚಿತ್ರ – ಕಹಳೆ ನ್ಯೂಸ್

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಇಂಡಸ್ಟ್ರಿಯಲ್ಲಿ ಹೊಸ ಬಾಕ್ಸ್ ಅಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ಖಾನ್ ಮತ್ತು ಕಪೂರ್ ಗಳು ಮಾಡದ ಮೋಡಿಯನ್ನ ಅಕ್ಷಯ್ ಚಿತ್ರಗಳು ಮಾಡುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬರಿ ನಟನೆಯಲ್ಲಿ ಮಾತ್ರ ಭೇಷ್ ಎನಿಸಿಕೊಳ್ಳುತ್ತಿಲ್ಲ ಅಕ್ಷಯ್. ನಟನೆ ಜೊತೆ ಕಮರ್ಷಿಯಲ್ ಆಗಿಯೂ ಸೂಪರ್ ಸ್ಟಾರ್ ಆಗ್ತಿದ್ದಾರೆ. ಹೌದು, ಅಕ್ಷಯ್ ಕುಮಾರ್ ಚಿತ್ರಗಳು ಈಗ ಬಿಟೌನ್ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ.
ಅಕ್ಷಯ್ ಕುಮಾರ್ ‘ಕೇಸರಿ’ ಟ್ರೈಲರ್ ನಲ್ಲಿ ಇದು ನೆಚ್ಚಿನ ದೃಶ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದಕ್ಕೆ ತಾಜಾ ಉದಾಹರಣೆ ಕೇಸರಿ. 21 ಸಿಖ್ಖರು 10 ಸಾವಿರ ಅಫ್ಘಾನ್ ಸೈನಿಕರನ್ನ ಹೊಡೆದುರುಳಿಸುವ ರೋಚಕ ಕಥೆಯನ್ನ ತೆರೆಮೇಲೆ ತಂದಿರುವ ಅಕ್ಷಯ್ ಕುಮಾರ್, 2019ರಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗಳಿಕೆಯಲ್ಲಿ ಈ ಚಿತ್ರ ಟಾಪ್ ಸ್ಥಾನವನ್ನ ಪಡೆದುಕೊಂಡಿದ್ದು, ಇದು ಬಾದ್ ಶಾ, ಖಾನ್ ಗಳನ್ನ ಆತಂಕಕ್ಕೆ ಗುರಿಮಾಡಿದೆ. ಹಾಗಿದ್ರೆ, ಕೇಸರಿ ಗಳಿಕೆ ಎಷ್ಟು? ಮುಂದೆ ಓದಿ…..

ಫಸ್ಟ್ ಡೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ: ಮೊದಲ ದಿನವೇ ದಾಖಲೆ ಕಲೆಕ್ಷನ್
ಕೇಸರಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುಶಃ ಇದು ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನಲಾಯ್ತು. ಆದ್ರೆ, ಲೆಕ್ಕಾಚಾರವನ್ನ ತಲೆಕೆಳಗಾಗಿಸಿ ಕೇಸರಿ ಸಿನಿಮಾ ಮೊದಲನೇ ದಿನವೇ ದಾಖಲೆ ಗಳಿಕೆ ಮಾಡಿ ಅಚ್ಚರಿ ನೀಡಿದೆ. ಮೊದಲ ದಿನ 21.06 ಕೋಟಿ ಗಳಿಸುವ ಮೂಲಕ 2019ನೇ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ.

ಮೊದಲ ಸ್ಥಾನ ಗಳಿಸಿದ ಚಿತ್ರ: ಗಲ್ಲಿಬಾಯ್ ದಾಖಲೆ ಉಡೀಸ್
ಈ ಹಿಂದೆ ತೆರೆಕಂಡಿದ್ದ ಗಲ್ಲಿಬಾಯ್ ಚಿತ್ರ ಮೊದಲ ದಿನ 19.4 ಕೋಟಿ ಗಳಿಸಿತ್ತು. ಇದು ಈ ವರ್ಷದ ದಾಖಲೆ ಆಗಿತ್ತು. ಆದ್ರೀಗ, ಕೇಸರಿ ಈ ಅಂಕಿಅಂಶವನ್ನ ಅಳಿಸಿಹಾಕಿ ಮುನ್ನುಗ್ಗುತ್ತಿದೆ. ಟೋಟಲ್ ಧಮಾಕ ಚಿತ್ರ ಮೊದಲ ದಿನ 16.50 ಕೋಟಿ ಗಳಿಸಿದ್ರೆ, ಕ್ಯಾಪ್ಟನ್ ಮಾರ್ವೆಲ್ ಸಿನಿಮಾ 13.01 ಕೋಟಿ ಕಲೆಕ್ಷನ್ ಮಾಡಿತ್ತು.

37 ಕೋಟಿ ಬಾಚಿದ ಅಕ್ಷಯ್: ಎರಡು ದಿನಕ್ಕೆ ಕೇಸರಿ ಗಳಿಸಿದ್ದೆಷ್ಟು?
ವಲ್ರ್ಡ್ ವೈಡ್ ಸುಮಾರು 3600 ಸ್ಕ್ರೀನ್ ನಲ್ಲಿ ತೆರೆಕಂಡಿದ್ದ ಕೇಸರಿ ಸಿನಿಮಾ ಎರಡನೇ ದಿನ (ಶುಕ್ರವಾರ) 17 ಕೋಟಿ ಗಳಿಸಿದೆ. ಒಟ್ಟು ಎರಡು ದಿನಕ್ಕೆ 37.76 ಕೋಟಿ ತನ್ನ ಖಾತೆಗೆ ಕೇಸರಿ ಚಿತ್ರ ಹಾಕಿಕೊಂಡಿದೆ.

ಸಾರಗರ್ಹಿ ಕದನದ ಕಥೆ: ನೈಜಕಥೆ ಆಧರಿತ ಚಿತ್ರ.!
ಅಂದ್ಹಾಗೆ, ಕೇಸರಿ ಸಿನಿಮಾ ಐತಿಹಾಸಿಕ ಘಟನೆ ಹಿನ್ನೆಲೆ ಮೂಡಿಬಂದಿರುವ ಚಿತ್ರ. 1987ರಲ್ಲಿ ನಡೆದ ಸಾರಗರ್ಹಿ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು ಭಯಾನಕವಾಗಿತ್ತು ಎಂಬುದನ್ನ ಇತಿಹಾಸದಲ್ಲಿ ಕೇಳಿದ್ವಿ ಅಷ್ಟೇ. ಅದನ್ನೇ ತೆರೆಮೇಲೆ ತಂದಿದೆ ಈ ಚಿತ್ರ. ‘ಕೇಸರಿ’ ಚಿತ್ರವನ್ನ ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್ 21ರಂದು ಜಗತ್ತಿನಾದ್ಯಂತೆ ತೆರೆಕಾಣಲಿದೆ.