ಅಯೋಧ್ಯೆ ರಾಮ ಮಂದಿರ ವಿವಾದಕ್ಕೆ ಬಿತ್ತು ತೆರೆ! ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟವರು ಯಾರು ಗೊತ್ತಾ?
ಅಯೋಧ್ಯೆ : ಅಯೋಧ್ಯಾ ರಾಮಮಂದಿರ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡಿ ಅದರ ಜೊತೆಯಲ್ಲೇ ಲಕ್ನೋನಲ್ಲಿ ಮಸೀದಿ ನಿರ್ಮಾಣ ಮಾಡಲು ಅನುಮತಿ ನೀಡಿ ಎಂದು ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಶಿಯಾ ಬೋರ್ಡ್ ಸಂಧಾನಕ್ಕೆ ಮುಂದಾಗಿದೆ.
ದೇಶದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕುವ ವಾತಾವರಣ ಮೂಡಬೇಕು. ಹಲವು ರಾಜಕೀಯ ಪಕ್ಷಗಳು, ಮುಖಂಡರ ಜೊತೆ ಚರ್ಚಿಸಿದ ಬಳಿಕ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯೀದ್ ವಸೀಮ್ ರಿಜ್ವಿ ಹೇಳಿದ್ದಾರೆ.
ಡಿಸೆಂಬರ್ 5ರಂದು ಸುಪ್ರೀಂ ಕೋರ್ಟ್ನಲ್ಲಿ ಅಂತಿಮ ವಿಚಾರಣೆ ನಡೆಯಲಿದ್ದು ಅದಕ್ಕೂ ಮೊದಲು ಈ ವಿವಾದಕ್ಕೆ ತೆರ ಎಳೆಯಲು ಶಿಯಾ ಮುಸ್ಲಿಮರು ಮುಂದಾಗಿದ್ದಾರೆ.
ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಮಸೀದಿ ನಿರ್ಮಿಸಿ ಎಂದು ಆ. 2017 ರಲ್ಲೇ ಸುಪ್ರೀಂ ಕೋರ್ಟ್ಗೆ ಶಿಯಾ ಬೋರ್ಡ್ ಹೇಳಿಕೆ ನೀಡಿತ್ತು. ಈ ಸಂಬಂಧ ಶ್ರೀ ಶ್ರೀ ರವಿಶಂಕರ್ ಗುರೂಜಿ ಜೊತೆಗೂ ಮುಸ್ಲಿಂ ಮುಖಂಡರ ಚರ್ಚೆ ನಡೆಸಿದ್ದಾರೆ.