Recent Posts

Monday, January 20, 2025
ಸುದ್ದಿ

ಬೆಂಗಳೂರಿನಲ್ಲಿ ಈ ಸಲ ಕಪ್ ನಮ್ದೇ ಹೋಟೆಲ್ – ಕಹಳೆ ನ್ಯೂಸ್

ಬೆಂಗಳೂರು: ಈವರೆಗೆ ನಡೆದ 11 ಐಪಿಎಲ್ ಟೂರ್ನಿಗಳಲ್ಲಿ ವಿರಾಟ್ ನಾಯಕತ್ವದ ಆರ್‍ಸಿಬಿ ಒಂದು ಬಾರಿಯೂ ಗೆದ್ದಿಲ್ಲ ಆದರೆ ಆರ್‍ಸಿಬಿ ಅಭಿಮಾನಿಗಳು ತಂಡದ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಯು ಎಳ್ಳಷ್ಟೂ ಕಡಿಮೆಯಾಗಿಲ್ಲ. ತಂಡದ ಆಟಗಾರರು ಬದಲಾವಣೆಯಾದರೂ, ಆ ಬಗ್ಗೆ ಚಿಂತಿಸದೆ ಅಭಿಮಾನಿಗಳು ಒಕ್ಕೊರಲಿನಿಂದ ‘ಈ ಸಲ ಕಪ್ ನಮ್ದೇ’ ಎಂದು ಕೂಗುತ್ತಿದ್ದಾರೆ.

ಅಭಿಮಾನಿಗಳ ಬಾಯಲ್ಲಿ ಹರಿದಾಡ್ತಾ ಇದ್ದ ಘೋಷ ವಾಕ್ಯ ಇದೀಗ ಎಲ್ಲೆಡೆ ಟ್ರೆಂಡ್ ಆಗಿ ಕೇಳಿ ಬರುತ್ತಿದೆ. ಈ ಘೋಷವಾಕ್ಯಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ‘ಈ ಸಲ ಕಪ್ ನಮ್ದೇ’ ಹೆಸರಿನ ಹೊಟೇಲ್ ಗ್ರಾಹಕರನ್ನು, ಆರ್‍ಸಿಬಿ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹೊಟೇಲ್‍ನ ಪ್ರತಿಯೊಂದು ಟೇಬಲ್-ಕುರ್ಚಿಗಳನ್ನು ಮತ್ತು ಗೋಡೆಗಳನ್ನು ವಿಕೆಟ್-ಬ್ಯಾಟ್‍ಗಳ ವಿನ್ಯಾಸ ಮಾಡಲಾಗಿದೆ. ಐಪಿಎಲ್ ಪಂದ್ಯದ ನೇರಪ್ರಸಾರವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು