Recent Posts

Monday, January 20, 2025
ಸುದ್ದಿ

“ಕುತ್ತಿಗೆ ಕಟ್ಟಿರುವ ಎಲ್ಲ ಸಾಕು ಪ್ರಾಣಿಗಳಿಗೂ ಸ್ವಾಗತ” – ಕಹಳೆ ನ್ಯೂಸ್

ಅಮೆರಿಕದಲ್ಲಿನ ಪಡಟ್‍ಕೊ ಎಂಬ ಮಳಿಗೆ ಸಾಕುಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೆ ಹೆಸರುವಾಸಿ. ಇತ್ತೀಚೆಗೆ ಆ ಅಂಗಡಿ ಮುಂದೆ, “ಕುತ್ತಿಗೆ ಕಟ್ಟಿರುವ ಎಲ್ಲ ಸಾಕು ಪ್ರಾಣಿಗಳಿಗೂ ಸ್ವಾಗತ” ಎಂಬ ಫಲಕ ತಗುಲಿ ಹಾಕಿದ್ದರು. ಇದನ್ನು ಗಮನಿಸಿದ ಟೆಕ್ಸಾಸ್‍ನ ವಿನ್ಸೆಂಟ್ ಬ್ರೌನಿಂಗ್ ಮತ್ತು ಶೆಲ್ಲಿ ಲಂಪ್‍ಕಿನ್ ತಮ್ಮಲ್ಲಿರುವ ಆಫ್ರಿಕನ್ ವಟುಸಿ ತಳಿಯ ಹಸುವನ್ನು ಮಳಿಗೆಗೆ ಕರೆದೊಯ್ದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಫ್ರಿಕನ್ ವಟುಸಿ ಬೃಹತ್ ಕೊಂಬಿರುವ ಹಸುವಿನ ತಳಿ. ಇದನ್ನು ಅವರು ಮಳಿಗೆಯೊಳಕ್ಕೆ ಬಿಡುವುದಿಲ್ಲ ಎಂದೇ ಭಾವಿಸಿದ್ದ ವಿನ್ಸೆಂಟ್-ಶೆಲ್ಲಿ, ಪರೀಕ್ಷೆ ಮಾಡಲೆಂದೇ ಅದನ್ನು ಅಂಗಡಿಗೆ ಕರೆದೊಯ್ದಿದ್ದರು. ಮಳಿಗೆಯವರು ನಗುಮುಖದಿಂಲೇ ಅದನ್ನು ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿ, ವಿನ್ಸೆಂಟ್-ಶೆಲ್ಲಿ ಅವರ ಶ್ಲಾಘನೆಗೂ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು