Friday, November 22, 2024
ಸುದ್ದಿ

ಗೋ-ಕಾರ್ಟ್ ವಾಹನ ಸ್ಟಾಲಿಯನ್-3ಗೆ ರಾಷ್ಟ್ರಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ರೀವನ್ ರೇಸಿಂಗ್ ತಂಡವು ಅಭಿವೃದ್ಧಿಪಡಿಸಿದ ಗೋ-ಕಾರ್ಟ್ ವಾಹನ ಸ್ಟಾಲಿಯನ್-3 ರಾಷ್ಟ್ರಮಟ್ಟದ ವಾಹನ ವಿನ್ಯಾಸ ಸ್ಪರ್ಧೆಯಲ್ಲಿ ಮೂರು ಪ್ರಥಮ ಸ್ಥಾನಗಳೊಂದಿಗೆ ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಂಧ್ರಪ್ರದೇಶದ ಕಾಕಿನಾಡದಲ್ಲಿನ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಸೈಗರ್ ಗೋ-ಕಾರ್ಟಿಂಗ್ ಚಾಂಪಿಯನ್‍ಶಿಪ್-2019 ಸ್ಪರ್ಧೆಯಲ್ಲಿ ಈ ವಾಹನವು ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದೆ. ದೇಶಾದ್ಯಂತ ವಿವಿಧ ಭಾಗಳಿಂದ ಬಂದ 26 ತಂಡಗಳು ಇದರಲ್ಲಿ ಪಾಲ್ಗೊಂಡಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಂತ್ರಿಕ ತಪಾಸಣೆ, ಭಾರ ಪರಿಶೀಲನೆ, ವೇಗನಿಯಂತ್ರಕ ಪರೀಕ್ಷೆ, ವಾಹನದ ಜಾರುವಿಕೆ, ಬಾಗುವಿಕೆ ಹೀಗೆ ಅನೇಕ ತರಹದ ಪರೀಕ್ಷೆಗಳನ್ನು ನಡೆಸಲಾಗಿತ್ತು. ಬೆಸ್ಟ್ ಬಿಲ್ಡ್‍ಕ್ವಾಲಿಟಿ, ಅಟೋಕ್ರಾಸ್ ಮತ್ತು 5ಎಸ್ ತಂತ್ರಜ್ಞಾನದ ಬಳಕೆಗೆ ಕ್ಲೀನ್ ಪಿಟ್ ಹೀಗೆ 3 ಪ್ರಥಮ ಬಹುಮಾನವನ್ನು ಈ ವಾಹನವು ಗೆದ್ದುಕೊಂಡಿದೆ. ಈ ರೀವನ್ ರೇಸಿಂಗ್ ತಂಡವು ಅಭಿವೃದ್ಧಿಪಡಿಸಿದ ಮೂರನೇ ವಾಹನ ಇದಾಗಿದೆ.

ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಅವರ ಸಲಹೆ ಸೂಚನೆಗಳೊಂದಿಗೆ ಡಾ.ದೀಪಕ್.ಕೆ.ಬಿ ಮತ್ತು ಸತೀಶ್ ಕುಮಾರ್.ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.