Recent Posts

Sunday, January 19, 2025
ರಾಜಕೀಯಸುದ್ದಿ

ತಂದೆ ಹಾಗೂ ಮಗಳು ಅನುಮಾನಾಸ್ಪದ ಸಾವು – ಕಹಳೆ ನ್ಯೂಸ್

ಬಂಟ್ವಾಳ: ತಂದೆ ಹಾಗೂ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. ಬಿ.ಸಿ.ರೋಡಿನ ವಸತಿ ಸಂಕೀರ್ಣವೊಂದರಲ್ಲಿ ಈ ಘಟನೆ ನಡೆದಿದೆ.

ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಹಾಗೂ ಆಕೆಯ ತಂದೆ ವಸತಿ ಸಂಕೀರ್ಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬಿ.ಸಿ.ರೋಡಿನ ವಿವೇಕ ನಗರದ ಖಾಸಗಿ ವಸತಿ ಸಂಕೀರ್ಣವೊಂದರ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಪಟ್ಟವರನ್ನು ಪ್ರಭಾಕರ (45) ಮತ್ತು ಪ್ರಮಣ್ಯ (12) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಅಪ್ಪ ಹಾಗೂ ಮಗಳು ಇಬ್ಬರು ವಿಷ ಸೇವಿಸಿ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಪ್ರಭಾಕರ ಮೊದಲು ಮಗಳಿಗೆ ವಿಷವಿಕ್ಕಿ ನಂತರ ತಾನೂ ವಿಷ ಸೇವಿಸಿದ್ದಾರೆ ಎಂದು ಅನುಮಾನಿಸಲಾಗಿದೆ. ಇನ್ನೇನಾದರೂ ಕಾರಣಗಳಿವೆಯೇ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು