Sunday, January 19, 2025
ಸುದ್ದಿ

ಸುಳ್ಯದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಇನ್ನಿಲ್

ಸುಳ್ಯ : ಮಾಜಿ ಶಾಸಕ ಬಾಕಿಲ ಹುಕ್ರಪ್ಪ (68) ಅವರು ಸೋಮವಾರ ಬೆಳಗ್ಗಿನ ಜಾವ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹುಕ್ರಪ್ಪ ಅವರನ್ನು ಕೆಲ ಐದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಮನೆಗೆ ಕರೆತರಲಾಗಿತ್ತು ಎಂದು ತಿಳಿದು ಬಂದಿದೆ. ಹುಕ್ರಪ್ಪ ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

ಹುಕ್ರಪ್ಪ ಅವರು 1983 ರಿಂದ 85 ರವರೆಗೆ ಸುಳ್ಯದ ಶಾಸಕರಾಗಿದ್ದರು. ಎಸ್‌ಸಿ ಮೀಸಲು ಕ್ಷೇತ್ರವಾದ ಸುಳ್ಯದ ಬಿಜೆಪಿಯ ಪ್ರಥಮJ ಶಾಸಕರಾಗಿದ್ದರು. 85 ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ತೊರೆದು ಜನತಾ ದಳ, ಕಾಂಗ್ರೆಸ್,ಬಂಗಾರಪ್ಪ ಅವರು ಸಂಸ್ಥಾಪಿಸಿದ್ದ ಕೆಸಿಪಿ.. ಹೀಗೆ ನಿರಂತರ ಪಕ್ಷಾಂತರ ಮಾಡಿದ್ದರು. ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸೇರಿದ್ದರು. ಒಂದು ತಿಂಗಳ ಹಿಂದೆ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುತ್ತಿಗಾರು ಪಂಚಾಯತ್ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಶಾಸಕರಾಗಿದ್ದ ಸಂದರ್ಭ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ ವೀಕ್ಷಿಸಲು ಸರ್ಕಾರದ ಪ್ರತಿನಿಧಿಯಾಗಿ ತೆರಳಿದ್ದರು.

ಶಾಸಕರಾದ ಹೊರತಾಗಿಯೂ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅವರು ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಯಾವುದೇ ಕಾರು ಬಂಗಲೆ ಹೊಂದದೆ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಿದ್ದರು.

ಹುಕ್ರಪ್ಪ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Response