Recent Posts

Sunday, January 19, 2025
ಸುದ್ದಿ

ಮಾಣಿ-ಬರಿಮಾರು ಸಂಪರ್ಕ , ಶಾಶ್ವತ ಕಿರು ಸೇತುವೆ ನಿರ್ಮಾಣ ಜನರ ಆಶಯ – ಕಹಳೆ ನ್ಯೂಸ್

ಮಾಣಿ – ಬರಿಮಾರು ಮತ್ತು ಬಾಳ್ತಿಲ ಹೀಗೆ ಮೂರು ಗ್ರಾಮಗಳ ಜನರಿಗೆ ಮಾಣಿ ಪೇಟೆಗೆ ಸಂಪರ್ಕ ಕಲ್ಪಿಬೇಕಾದರೆ ಮಾಣಿ- ಲಕ್ಕಪ್ಪಕೋಡಿ-ಅರ್ಬಿ- ಕಡಮಡ್ಕ ರಸ್ತೆಯಿಂದ ಸಂಚಾರ ಮಾಡಬೇಕಾಗುತ್ತದೆ. ಆದರೆ ಈ ಹಿಂದೆ ಕಡಮಡ್ಕ ಬಳಿ ಜನರಿಗೆ ನಡೆದಾಡಲು ಕಷ್ಟ ಎನಿಸುವ ದುರ್ಗಮ ಹಾದಿ ಇತ್ತು. ಆದರೆ ಈಗ ಅರ್ಬಿ ತೋಡಿಗೆ ಮಣ್ಣು ಹಾಕಿ ತಾತ್ಕಾಲಿಕ ಸಂಪರ್ಕ ರಸ್ತೆ ಕಲ್ಪಿಸಲಾಗಿದೆ.

ರಿಕ್ಷಾ ,ಜೀಪು,ಕಾರ್‍ಗಳು ಈ ತಾತ್ಕಾಲಿಕ ಸಂಪರ್ಕ ರಸ್ತೆಯಲ್ಲಿ ಸಂಚರಿಸುವ ಹಾಗಾಗಿದೆ. ಆದ್ರೆ ಇದು ಮಣ್ಣಿನ ರಸ್ತೆಯಾಗಿದ್ದರಿಂದ ಬೇಸಿಗೆ ಕೊನೆಯವರೆಗೆ ಉಳಿಯಬಹುದು. ಅದೇ ತಾತ್ಕಾಲಿಕ ತೋಡಿಗೆ ಮಣ್ಣು ಹಾಕಿ ಮಾಡಿದ ರಸ್ತೆಯಾದ್ದರಿಂದ ಮಳೆಗಾಲದಲ್ಲಿ ಉಳಿಯೊಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದೊಡ್ಡ ಪ್ರಮಾಣದ ಪ್ರವಾಹಕ್ಕೆ ಈ ಮಣ್ಣು ಕೊಚ್ಚಿಹೊಗುತ್ತದೆ. ಆದ್ದರಿಂದ ಈ ರಸ್ತೆಯನ್ನು ತಗ್ಗಿಸುವ ಕೆಲಸ ಅನಿವಾರ್ಯ. ಮುಂದಿನ ದಿನಗಳಲ್ಲಿ ಅರ್ಬಿ ತೋಡಿಗೆ ಶಾಶ್ವತ ಕಿರು ಸೇತುವೆ ನಿರ್ಮಿಸಿ ಸರ್ವ ಋತು ಮಾಣಿ- ಬರಿಮಾರು ಸಂಪರ್ಕ ರಸ್ತೆ ಆಗುವಲ್ಲಿ ಜನಪ್ರತಿನಿದಿಗಳಿಂದ ಉತ್ತಮ ಸ್ಪಂದನೆಯನ್ನು ಸ್ತಳೀಯ ನಾಗರಿಕರು ನಿರೀಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು