Monday, January 20, 2025
ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ: ಒರ್ವ ಸಾವು – ಕಹಳೆ ನ್ಯೂಸ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದು ಒರ್ವ ಮೃತಪಟ್ಟು ಒಂದೇ ಮನೆಯ ಐವರು ಗಂಬೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನ ಮುಖ್ಯ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಂಗಳೂರು ಬಜಾಲ್ ನಿವಾಸಿ ಕೆ.ಎಮ್. ಶರೀಫ್ ಮೃತಪಟ್ಟಿದ್ದಾರೆ. ಶರೀಫ್ ಅವರ ಪತ್ನಿ ಜಮೀಲಾ, ಮಕ್ಕಳಾದ ಸಫ್ ನಾಜ್, ಸಫಾ, ಸಫ್ ವಾನ್, ಸಫ್ರೀನಾ ಅವರು ಗಂಭೀರ ಸ್ವರೂಪದ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದೇ ಮನೆಯ ಸದಸ್ಯರು ಪುತ್ತೂರು ಸಂಬಂಧಿಕರ ಗ್ರಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿ, ಕಾರ್ಯಕ್ರಮ ಮುಗಿಸಿ ವಾಪಾಸು ಮಂಗಳೂರು ಕಡೆಗೆ ಹೋಗುವ ವೇಳೆ ಬಿಸಿರೋಡಿನಲ್ಲಿ ನಡೆದಿದೆ. ಮೃತ ಶರೀಫ್ ಅವರ ಹಿರಿ ಮಗ ಸಫ್ವಾನ್ ಅವರು ಚಾಲನೆ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಿಂದ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಅತೀ ವೇಗದ ಚಾಲನೆಯಾ ಅಥವಾ ಓವರ್ ಟೇಕ್ ಮಾಡಿದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬಿಸಿರೋಡಿನಲ್ಲಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆಯಾ ಎನ್ನುವುದು ತನಿಖೆಯ ಬಳಿಕ ಗೊತ್ತಾಗಬೇಕಾಗಿದೆ.

ಘಟನಾ ಸ್ಥಳ ಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುನಾಥ, ಎ.ಎಸ್.ಐ.ಕುಟ್ಟಿ, ಸಿಬ್ಬಂದಿಗಳಾದ ಮೋನಪ್ಪ, ಕೃಷ್ಣ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.