Sunday, January 19, 2025
ಅಂಕಣಸುದ್ದಿ

ತಾಜ್ ಮಹಲ್ ಶಿವಾಲಯವಾಗಿತ್ತು ಎನ್ನೋಕೆ ಸಾಕ್ಷಿಗಳು ಲಭ್ಯ | ತಾಜ್ ಮಹಲ್, ತೇಜೋಮಹಲ್!

ಸಂಗ್ರಹ ಅಂಕಣ : ತಾಜ್ ಮಹಲ್ ಬಗ್ಗೆ ಸಂಶೋಧನೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ಹೊರ ತಂದವರಲ್ಲಿ ಪ್ರೊಫೆಸರ್ ಪಿ.ಎನ್. ಓಕ್ ಅವರು ಪ್ರಮುಖರು. ತಾಜ್ ಮಹಲಿನ ನಿಗೂಢ ಇತಿಹಾಸವನ್ನು ಪ್ರೊಫೆಸರ್ ಪಿ.ಎನ್. ಓಕ್ ಅವರು ಎಳೆಎಳೆಯಾಗಿ ಬಿಡಿಸಿ ತಿಳಿಸಿದ್ದಾರೆ. ಅವರು ತಮ್ಮ ಸಂಶೋಧನೆಯಿಂದ ಇಡೀ ಜಗತ್ತಿಗೆ ತಾಜ್ ಮಹಲ್ ವೈದಿಕ ದೇವಾಲಯವಾಗಿತ್ತು ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿಸಲು ಸಂಶೋಧನೆ ಮಾಡಿ “ತಾಜ್ ಮಹಲ್” ಎಂಬ ಪುಸ್ತಕವನ್ನು ಬರೆದಿದ್ದಾರೆ.

ಸುಮಾರು ವರ್ಷಗಳ ಸಂಶೋಧನೆಯಿಂದ ಪ್ರೊಫೆಸರ್ ಪಿ.ಎನ್. ಓಕ್ ಅವರು “ತಾಜ್ ಮಹಲ್” ಎಂಬ ಪುಸ್ತಕದಲ್ಲಿ ತಾಜ್ ಮಹಲ್ ಮುಮ್ತಾಜಳ ಗೋರಿಯಲ್ಲ ಅದೊಂದು ವೈದಿಕ ದೇವಾಲಯವಾಗಿತ್ತು. ಮತ್ತು ಅದನ್ನು “ತೇಜೋ ಮಹಾಲಯ” ಎ೦ದು ಕರೆಯುತ್ತಿದ್ದರು.ಅಲ್ಲಿ ಶಿವನನ್ನು ಆರಾಧಿಸುತ್ತಿದ್ದರು. ಅದು ಶಿವನ ದೇವಾಲಯವಾಗಿತ್ತು ಎಂದು ಪ್ರೊಫೆಸರ್ ಪಿ.ಎನ್. ಓಕ್ ಅವರು “ತಾಜ್ ಮಹಲ್” ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ.
ತೇಜೋ ಮಹಾಲಯವನ್ನು ಅಂದಿನ ಜೈಪುರುದ ರಾಜನಾಗಿದ್ದ ಜೈ ಸಿಂಗ್ ನಿಂದ ಕಿತ್ತುಕೊಳ್ಳಲಾಗಿತ್ತು ಎಂದು ಪ್ರೊಫೆಸರ್ ಪಿ.ಎನ್. ಓಕ್ ಅವರು ಉಲ್ಲೇಖಿಸಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಶಹ ಜಹಾನ್ ತನ್ನ “ಬಾದಶಹನಾಮ“ದಲ್ಲಿ ರಾಜಾ ಜೈಸಿಂಗನಿಂದ ಆಗ್ರಾದ ಅಸಾಧಾರಣವಾದ ಸುಂದರ ಭವ್ಯ ಮಹಲು ಮತ್ತು ಸುಂದರ ಅರಮನೆಯನ್ನು ಮುಮ್ತಾಜಳ ಶವಸಂಸ್ಕಾರಕ್ಕೆ ಪಡೆದದ್ದನ್ನು ಉಲ್ಲೇಖಿಸಿದ್ದಾನೆ. “ಬಾದಶಹನಾಮ” ಅಂದ್ರೆ ಶಹ ಜಹಾನ್ ತನ್ನ ದಾಖಲೆಗಳನ್ನು ಬರೆದಿಡುತ್ತಿದ್ದ ಹೊತ್ತಿಗೆ. ಶಹ ಜಹಾನ್ ಆ ತೇಜೋ ಮಹಲ್ ನ್ನು ತನಗೆ ಒಪ್ಪಿಸಿ ಶರಣಾಗುವಂತೆ ರಾಜಾ ಜೈ ಸಿಂಗ್ ನಿಗೆ ಪತ್ರ ಬರೆದಿದ್ದನಂತೆ. ಆ ಪತ್ರದ ದಾಖಲೆಗಳು ಈಗಲೂ ರಹಸ್ಯ ಸಂಗ್ರಹಣೆಯಲ್ಲಿ ಇವೆ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಮುಸ್ಲಿಂ ಆಢಳಿತದಲ್ಲಿ ಒಂದು ವಿಚಿತ್ರ ಪದ್ದತಿ ಇತ್ತು. ಮುಸ್ಲಿಂ ದೊರೆಗಳು ತಾವು ದಾಳಿ ಮಾಡಿ ವಶಪಡಿಸಿಕೊಂಡ ಅರಮನೆಗಳನ್ನು ಸತ್ತ ಪ್ರಜೆಗಳ ಶವ ಸಂಸ್ಕಾರಕ್ಕಾಗಿ ಬಳಸುತ್ತಿದ್ದರು. ಹಾಗೆಯೇ ತೇಜೋ ಮಹಾಲಯವನ್ನು ಶಹ ಜಹಾನ್ ವಶಪಡಿಸಿಕೊಂಡು ತನ್ನ ಹೆಂಡತಿ ಮುಮ್ತಾಜಳ ಗೋರಿ ಕಟ್ಟಲು ಬಳಸಿದ. ಪ್ರೊಫೆಸರ್ ಪಿ.ಎನ್. ಓಕ್ ಅವರು ತಮ್ಮ ಸಂಶೋಧನೆಯಲ್ಲಿ ಹೇಳುತ್ತಾರೆ.‌ಮುಸ್ಲಿಂ ರಾಷ್ಟ್ರಗಳ ಉದಾಹರಣೆ ತೆಗೆದುಕೊಂಡರೆ ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿ ಕಟ್ಟಡವನ್ನು “ಮಹಲ್” ಎಂದು ಕರೆಯೋದಿಲ್ಲ. ಹಾಗಾದರೆ ತಾಜ್ ಮಹಲ್ ಹೆಸರು ಹೇಗೆ ಬಂತೆಂದು ನಾವು ವಿಚಾರ ಮಾಡಲೇಬೇಕು. ಟೊಳ್ಳು ಇತಿಹಾಸಕಾರರು ಹೇಳುವ ಪ್ರಕಾರ “ತಾಜ್ ಮಹಲ್ “ ಎನ್ನುವ ಪದವು “ “ಮುಮ್ತಾಜ್ ಮಹಲ್ “ ಎನ್ನುವ ಪದದಿಂದ ಬಂದಿದೆ ಎಂದು ಟೊಳ್ಳು ಇತಿಹಾಸಕಾರು ಹೇಳುತ್ತಾರೆ. ಟೊಳ್ಳು ಇತಿಹಾಸಕಾರರ ಈ ಟೊಳ್ಳನ್ನು ಪ್ರೊಫೆಸರ್ ಓಕ್ ಅವರು ತಮ್ಮ ವಾದಗಳಿಂದ ಬಯಲಿಗೆಳೆಯುತ್ತಾರೆ.
ಟೊಳ್ಳು ಇತಿಹಾಸಕಾರರು ಮುಮ್ತಾಜಳ ನಿಜವಾದ ಹೆಸರು “ಮುಮ್ತಾಜ್-ಉಲ್- ಝಮಾನಿ“ ಹೀಗಾಗಿ ಮುಮ್ತಾಜ್ ಮಹಲ್ ಹೆಸರಿನಿಂದ ತಾಜ್ ಮಹಲ್ ಹೆಸರು ಬಂತೆಂದು ಹೇಳುತ್ತಾರೆ. ಅದಕ್ಕೆ ಪ್ರೊಫೆಸರ್ ಓಕ್ ಅವರು
(ಮುಮ್ತಾಜ್) ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎಂದಿಡುತ್ತಾರೆಯೇ? ಎಂಬ ಪ್ರಶ್ನೆಯನ್ನು ಪ್ರೊಫೆಸರ್ ಓಕ್ ಅವರು ಕೇಳುತ್ತಾರೆ. ಇದಕ್ಕೆ ಟೊಳ್ಳು ಇತಿಹಾಸಕಾರರು ಬೆಪ್ಪರಂತೆ ಉತ್ತರಿಸದೆ ಪಲಾಯನವಾಗ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಜ್ ಮಹಲ್ ಎಂಬ ಹೆಸರು ತೇಜೋ ಮಹಾಲಯದ ವಿಕೃತ ರೂಪವಷ್ಟೇ. ತೇಜೋ ಮಹಾಲಯದ ಮೇಲೆ ಶಹ ಜಹಾನ್ ದಾಳಿ ಮಾಡಿ ಅದಕ್ಕೆ ತಾಜ ಮಹಲ್ ಎಂಬ ಹೆಸರಿಟ್ಟ ಅಷ್ಟೇ. ಅದು ಮೂಲತಃ ವೈದಿಕ ದೇವಾಲಯ ಹೊರತು ಬೇರನು ಅಲ್ಲ.

ಇತಿಹಾಸಾರರು ಹೇಳುವಂತೆ ತಾಜ್ ಮಹಲ್ ಒಂದು ಪೇಮ ಸೌಧ. ಮುಮ್ತಾಜ್ ಮತ್ತು ಶಹ ಜಹಾನ್ ರ ಪ್ರೇಮಕ್ಕೆ ಸಾಕ್ಷಿ ತಾಜ್ ಮಹಲ್. ಆದರೆ ಇಲ್ಲಿ ಮಹತ್ವದ ವಿಷಯವೆಂದರೆ ಶಹ ಜಹಾನನ ಕಾಲದ ಅವನ ಆಸ್ಥಾನದ ಯಾವುದೇ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊಫೆಸರ್ ಓಕ್ ಅವರು ಒತ್ತಿ ಹೇಳುತ್ತಾರೆ. ಹಾಗಾದರೆ ಇತಿಹಾಸಕಾರರು ಇತಿಹಾಸವನ್ನು ಮುಚ್ಚಿ ಹಾಕಲು ಕಥೆ ಕಟ್ಟಿದ್ದಾರೆ ಎನ್ನಬಹುದು.
ತೇಜೋಮಹಲ್ ಈಶ್ವರ (ಶಿವನ) ದೇವಾಲಯವಿತ್ತು. ಅಲ್ಲಿ ತಾಜ್ ಮಹಲ್ ಎಂದು ಹೆಸರಿಡುವ ಮುನ್ನವೇ ಆ ಕಟ್ಟಡ ಅಲ್ಲಿತ್ತು. ತೇಜೋಮಹಲ್ ದಾಳಿಗೊಳಗಾಗಿ ತಾಜ್ ಮಹಲ್ ಆಗಿದೆ ಎಂಬುದಕ್ಕೆ ಹಲವಾರು ದಾಖಲೆಗಳನ್ನು ಪ್ರೊಫೆಸರ್ ಓಕ್ ಅವರು ನೀಡುತ್ತಾರೆ. ಉದಾಹರಣೆಗೆ,

1. ಮರ್ವಿನ್ ಮುಲ್ಲರ್ ಎಂಬ ನ್ಯೂಯಾರ್ಕಿನ ಪ್ರೊಫೆಸರ್ ತಾಜ್ ಮಹಲ್ ಕಟ್ಟಡದ ಬಾಗಿಲಿನ ಅವಶೇಷಗಳನ್ನು ತೆಗೆದುಕೊಂಡು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿಂತ 300 ವರ್ಷ ಪುರಾತನದ್ದು ಎಂದು ಸಾಬೀತಾಗಿದೆ. ಅಂದರೆ ತಾಜ್ ಮಹಲ್ ಆಗುವ 300 ವರ್ಷಗಳ ಮುಂಚೆ ಅಲ್ಲೊಂದು ಕಟ್ಟಡವಿತ್ತು .ಅದುವೇ “ತೇಜೋಮಹಲ್”. ಅಲ್ಲಿ ಶಿವನನ್ನು ಆರಾಧಿಸುತ್ತಿದ್ದರು ಎಂದು ಸ್ಪಷ್ಠವಾಗಿ ಹೇಳಬಹುದು.

2. ಮುಮ್ತಾಜಳ ಸಾವಿನ ಕೇವಲ ಏಳು ವರ್ಷಗಳ ನಂತರ ಅಂದರೆ 1638ರಲ್ಲಿ ಯುರೋಪ್ ಪ್ರವಾಸಿಗನೊಬ್ಬ ಆಗ್ರಾಕ್ಕೆ ಭೇಟಿ ನೀಡಿದ್ದ.ಆತ ತನ್ನ ಪ್ರವಾಸದ ಟಿಪ್ಪಣಿಯಲ್ಲಿ
ಅಲ್ಲಿಯ ಪ್ರವಾಸದ ಬಗ್ಗೆ,ಸ್ಥಳದ ಬಗ್ಗೆ, ಜನ-ಜೀವನದ ಬಗ್ಗೆ ವಿವರಣೆ ನೀಡಿದ್ದಾನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಉಲ್ಲೇಖಿಸಿಲ್ಲ. ಅಂದರೆ ಅಲ್ಲಿ ಆವಾಗ ತಾಜ್ ಮಹಲ್ ಇರಲೇ ಇಲ್ಲ ಅಂತಾಯ್ತಲ್ಲ.

3. ಆಗ್ರಾಕ್ಕೆ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗನೊಬ್ಬ ಮುಮ್ತಾಜ್ ಮರಣದ ಒಂದು ವರ್ಷದೊಳಗೆ ಆಗ್ರಾಕ್ಕೆ ಭೇಟಿ ನೀಡಿದ್ ಶಹ ಜಹಾನ್ ಸಮಯಕ್ಕಿಂತ ಮೊದಲಿನಿಂದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆಂಬುದನ್ನು ತನ್ನ ಟಿಪ್ಪಣೆಯಲ್ಲಿ ಉಲ್ಲೇಖಿಸುತ್ತಾನೆ. ಅಂದರೆ ಶಹ ಜಹಾನ್ ನ ಮುಂಚೆ ಅಲ್ಲೊಂದು ಕಟ್ಟಡವಿತ್ತು ಅದು ಬೇರೆ ಯಾವದೂ ಅಲ್ಲ ಅದುವೇ ತೇಜೋ ಮಹಲ್. ಶಿವನ ದೇವಾಲಯ.

ತಾಜ್ ಕಟ್ಟಡ ವೈದಿಕ ದೇವಾಲಯವಾಗಿತ್ತು ಎನ್ನುವುದಕ್ಕೆ ಆ ಕಟ್ಟಡದಲ್ಲಿ ಇಂದಿಗೂ ಅನೇಕ ಹಿಂದೂ ಸಂಪ್ರದಾಯದ ಕುರುಹುಗಳಿವೆ.

1) ತಾಜ್ ಕಟ್ಟಡದ ಗುಮ್ಮಟದ ಮೇಲೆ ಕಲಶದ ಚಿತ್ರವಿದೆ. ಸಭಾಂಗಣದ ಗೋಡೆಯಲ್ಲೂ ಕಲಶದ ಚಿತ್ರ ಬಿಡಿಸಲಾಗಿದೆ. ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆಂಪು ಕಮಲದ ಚಿತ್ರವಿದೆ. ಗೋಡೆಗಳ ಮೇಲೆ ಬರೆಯಲಾದ ಹೂಗಳ ಚಿತ್ರ ಬಿಡಿಸಲಾಗಿದೆ. ಅದು ಅಲ್ಲದೆ ಆ ಹೂಗಳ ಚಿತ್ರದ ನಡುವೆ “ ಓಂ“ ಸಂಕೇತವೂ ಇದೆ. ಈ ಎಲ್ಲಾ ಕುರುಹುಗಳು ವೈದಿಕ ಶೈಲಿಯ ರೂಪದಲ್ಲಿವೆ. ಹಾಗಾದರೆ ತಾಜ್ ಮಹಲ್ ವೈದಿಕ ದೇವಾಲಯವೆಂದಾಯ್ತಲ್ವಾ? ಅದು ತಾಜ್ ಮಹಲದ ಅಲ್ಲ ತೇಜೋಮಹಲ್(ಶಿವನ ದೇವಾಲಯ).
2) ತಾಜ್ ಕಟ್ಟಡದ ಕೆಲವು ಕೋಣೆಗಳನ್ನು ಇವತ್ತಿಗೂ ಬೀಗ ಹಾಕಲಾಗಿದೆ. ಅವುಗಳು ಶಹ ಜಹಾನನ ಕಾಲದಿಂದಲೂ ಬೀಗ ಹಾಕಲ್ಪಟ್ಟಿದ್ದು,ಇವಾಗಲೂ ಬೀಗ ಹಾಗೆಯೇ ಇವೆ. ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗೆ ಇರುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೋಣೆಯೊಳಗಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಇದೆ. ಪ್ರೊಫೆಸರ್ ಓಕ್ ಅವರು ಹೇಳುವ ಪ್ರಕಾರ ಆ ಬೀಗ ಹಾಕಿರುವ ಕೋಣೆಗಳಲ್ಲಿ ಭಗ್ನಗೊಂಡ ಶಿವನ ಮೂರ್ತಿ ಹಾಗೂ ಹಿಂದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಇರಬಹುದು ಎಂದಿದ್ದಾರೆ.
ಪ್ರೊಫೆಸರ್ ಓಕ್ ಅವರ ಸಂಶೋಧನೆಯಿಂದ ತಾಜ್ ಮಹಲ್ ಇತಿಹಾಸ ಬೆಳಕಿಗೆ ಬರುತ್ತಿದೆ. ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ತಾಜ್ ಮಹಲ್ ಶಿವನ ದೇವಾಲಯವಾಗಿತ್ತೆಂದು ಸ್ಪಷ್ಠವಾಗಿ ಹೇಳಬಹುದು.

Leave a Response