ಈ ಲೋಕಸಭಾ ಕ್ಷೇತ್ರದಲ್ಲಿ ತಂದೆ ಮತ್ತು ಮಗಳ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಆಂಧ್ರ ಪ್ರದೇಶದ ಅರಾಕು ಲೋಕಸಭೆಯಲ್ಲಿ ತಂದೆ ಮತ್ತು ಮಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಮಗಳು ಶ್ರುತಿ ದೇವಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದರೆ ತಂದೆ ವೈರಿಚರ್ಲಾ ಕಿಶೋರ್ ಚಂದ್ರದೇವ್ ತೆಲಗು ದೇಶಂ ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ವೈರಿಚರ್ಲಾ ಕಿಶೋರ್ ತಿಂಗಳ ಹಿಂದಷ್ಟೆ ಕಾಂಗ್ರೆಸ್ ತೊರೆದು ಟಿಡಿಪಿ ಸೇರಿದ್ದರು. ಆರು ಬಾರಿ ಸಂಸತ್ ಪ್ರವೇಶ ಮಾಡಿದ್ದ ಕಿಶೋರ್ ಅವರಿಗೆ ಈಗ ಮಗಳೇ ಸವಾಲು ಹಾಕಿದ್ದಾರೆ.