ಪುತ್ತೂರು: ತಂತ್ರಜ್ಞಾನದ ಬೆಳವಣಿಗೆಯು ಸಾಹಿತ್ಯ ಕ್ಷೇತ್ರಕ್ಕೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ಆಧುನಿಕ ತಂತ್ರಜ್ಞಾನವು ಪ್ರತಿಯೊಬ್ಬರ ಜೀವನದ ಒಂದು ಅಂಗವಾಗಿದೆ. ದಿನದ ಆರಂಭದಿಂದ ಹಿಡಿದು ಪ್ರತಿ ಹೆಜ್ಜೆಗೂ ಮಾನವ ತಂತ್ರಜ್ಞಾನವನ್ನು ಅವಲಂಬಿಸಿಕೊಂಡಿದ್ದಾನೆ ಎಂದು ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಶಿವಪ್ರಸಾದ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗ ಮತ್ತು ಆಂಗ್ಲ ಸಾಹಿತ್ಯ ಸಂಘದ ಆಶ್ರಯದಲ್ಲಿ ಆಯೋಜನೆಗೊಂಡ “ಗಾಲಾ ೨೦೧೯” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು.
ತಂತ್ರಜ್ಞಾನದ ಉಗಮದಿಂದ ಸಾಹಿತ್ಯ ಕ್ಷೇತ್ರಕ್ಕೆ ಅದರ ಕೊಡುಗೆಯನ್ನು ನೀಡುತ್ತಿದೆ. ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ಹಲವು ರೀತಿಯ ಪುಸ್ತಕಗಳು ಜಾಲತಾಣಗಳ ಮೂಲಕ ಪಡೆಯುವ ವ್ಯವಸ್ಥೆಯು ಸಹಕಾರಿಯಾಗಿದೆ. ಅದೇ ರೀತಿ ಹೊಸ ಹೊಸ ಆಲೋಚನೆಗಳನ್ನು ಕಲಿತುಕೊಳ್ಳವ ಸೌಲಭ್ಯವು ಇದರಿಂದ ದೊರೆಯುತ್ತದೆ ಎಂದರು.
ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಸಮಯದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ತೆರಳಿ ಅಲ್ಲಿ ಅಭ್ಯಸಿಸುತ್ತಿದ್ದ ಕಾಲವಿತ್ತು. ಆದರೆ ಈಗ ಇದು ಬದಲಾಗಿದೆ.
ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೊಬೈಲ್‌ನಲ್ಲೇ ಓದುತ್ತಿದ್ದಾರೆ. ಜೊತೆಗೆ ಬ್ಲೋಗ್‌ಗಳಲ್ಲಿ ನಮ್ಮ ಅನುಭವದ ಬರವಣಿಗೆಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದರು. ವೇದಿಕೆಯಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಮೋತಿ ಬಾೈ ಉಪಸ್ಥಿತರಿದ್ದರು.