ಕೋಳೇಗಾಲ – ತಾಲೂಕಿನ ತಿಮ್ಮಾರಾಜಿಪುರ ಗ್ರಾಮದಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾಮಾಂತರ ಠಾಣಾ ಪೊಲೀಸರು ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ.
ಗ್ರಾಮದ ನಿವಾಸಿ ಕೆಂಪೆಲಿಂಗೇಗೌಡ (51) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈತನ ಪತ್ನಿ ರಾಜೇಶ್ವರಿ ಬಂಧಿತೆ ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗ್ರಾಮದ ಯುವಕ ಲಿಂಗರಾಜು ತಲೆ ಮರೆಸಿಕೊಂಡಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಘಟನೆ ಮೃತ ಕೆಂಪೆಲಿಂಗೇಗೌಡ ಬಂಧಿತ ಆರೋಪಿ ರಾಜೇಶ್ವರಿಗೆ ರವಿ ಮತ್ತು ರಘು ಇಬ್ಬರು ಪುತ್ರರಿದ್ದು ಎಲ್ಲರು ಒಟ್ಟಿಗೆ ಜೀವನ ನಡೆಸುತ್ತಿದ್ದರು ಈ ನಡುವೆ ರಾಜೇಶ್ವರಿ ಗ್ರಾಮದ ಅನ್ಯ ಜನಾಂಗದ ಯುವಕ ಲಿಂಗರಾಜು ಎಂಬಾತನೂಂದಿಗೆ ಬಹಿರಂಗವಾಗಿಯೇ ಅಕ್ರಮ ಸಂಬಂಧವಿರಿಸಿಕೊಂಡಿದ್ದರು.
ಈ ವಿಚಾರದಲ್ಲಿ ಕೆಲ ದಿನಗಳಿಂದ ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಮನಸ್ತಾಪ ಎದುರಾಗಿತ್ತು. ಅದರೆ ಪತ್ನಿ ರಾಜೇಶ್ವರಿ ಅಕ್ರಮ ಸಂಬಂಧವನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದ ಹಿನ್ನೆಲೆ ಮಾ 23 ರಂದು ಸಂಜೆ ಪತಿ ಕೆಂಪೆಲಿಂಗೇಗೌಡ. ಮನನೂಂದು ತಮ್ಮ ಹಳೇ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ರ ರವಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ತಂದೆ ಆತ್ಮಹತ್ಯೆ ಗೆ ನನ್ನ ತಾಯಿ ಹಾಗು ಆಕೆಯ ಪ್ರಿಯಕರ ಕಾರಣ ಎಂದು ಆರೋಪಿಸಿ ದೂರು ದಾಖಲಿಸಿದ್ದರು ದೂರು ದಾಖಲಿಸಿಕೊಂಡ ಪಿ ಎಸ್ ಐ ವಿ ಸಿ ವನರಾಜು ರಾಜೇಶ್ವರಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ರಾಜೇಶ್ವರಿಯ ಪ್ರಿಯಕರನ ಬಂಧನಕ್ಕಾಗಿ ಪೊಲೀಸರು ಬಲೆಬಿಸಿದ್ದಾರೆ.