Recent Posts

Tuesday, November 26, 2024
ಸುದ್ದಿ

ಸಾಮಾಜಿಕ ದುಷ್ಟಪ್ರವೃತ್ತಿಯನ್ನು ತಡೆಯಲು ರಾಷ್ಟ್ರೀಯ ಹಿಂದೂ ಆಂದೋಲನ – ಕಹಳೆ ನ್ಯೂಸ್

ದೇಶದಲ್ಲಿ ಮಹಿಳೆ ಹಾಗೂ ಅಲ್ಪವಯಸ್ಸಿನ ಹುಡುಗಿಯರ ಮೇಲೆ ಲೈಂಗಿಕ ಅತ್ಯಾಚಾರ ಹಾಗೂ ಬಲಾತ್ಕಾರ ಪ್ರಕರಣಗಳು ಪ್ರಚಂಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರ ಹಿಂದೆ ಒಂದು ಮಹತ್ವದ ಕಾರಣವೆಂದರೆ ಪಾರ್ನಸೈಟ್, ಆಶ್ಲೀಲತೆ ಹಾಗೂ ‘ಆನ್ ಲೈನ್’ ವೆಶ್ಯಾವೃತ್ತಿಯನ್ನು ಮಾಡುವ ಜಾಲತಾಣವನ್ನು ನೋಡುವುದೇ ಆಗಿದೆ.

ಅದೇ ರೀತಿ ಸದ್ಯ ‘ವೆಬ್ ಸಿರಿಜ’ ನ ಹಾವಳಿಯಿಂದಾಗಿ ಅಶ್ಲೀಲತೆ, ಅನೈತಿಕತೆ ಹಾಗೂ ಅಪರಾಧದ ಸೀಮೆಯು ದಾಟಿದ ಚಿತ್ರಣವು ಯಾವುದೇ ನಿರ್ಬಂಧವಿಲ್ಲದೇ ಪ್ರಸಾರವಾಗುತ್ತಿದೆ. ಆದ್ದರಿಂದ ಇಂತಹ ಸಾಮಾಜ ಘಾತಕ ಪಾರ್ನಸೈಟ್, ಅಶ್ಲೀಲತೆ ಹಾಗೂ ‘ಆನ್ ಲೈನ್’ ವೆಶ್ಯಾವೃತ್ತಿಯ ಮೇಲೆ ನಿರ್ಬಂದವನ್ನು ಹೇರಬೇಕು, ಅದೇ ರೀತಿ ಈ ರೀತಿಯ ‘ವೆಬ್ ಸಿರೀಜ’ ಮೇಲೆ ನಿರ್ಬಂಧವನ್ನು ಹೇರಬೇಕು, ಎಂಬ ಬೇಡಿಕೆಯನ್ನೂ ಈ ಸಮಯದಲ್ಲಿ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲಿನಲ್ಲಿ ಕಲಬೆರಿಕೆಯನ್ನು ಮಾಡಿ ಮನುಷ್ಯನ ಆರೋಗ್ಯದೊಂದಿಗೆ ಚೆಲ್ಲಾಟವಾಡುವವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಿರಿ !- ಶ್ರೀ ಮಧುಸೂದನ್ ಅಯ್ಯಾರ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಗತಿಕ ಸ್ತರದಲ್ಲಿ ಎಲ್ಲಕ್ಕಿಂತ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶ ಎಂದೇ ಖ್ಯಾತಿ ಪಡೆದ ಭಾರತ ದೇಶದಲ್ಲಿ ದುರ್ದೈವದಿಂದ ಸದ್ಯ ಹಾಲಿನಲ್ಲಿ ಕಲಬೆರಿಕೆ ಮಾಡಿ ಮಾರಾಟ ಮಾರುತ್ತಿದ್ದಾರೆ. ದೇಶದಾದ್ಯಂತ ಮಾರಾಟ ಮಾಡುವ ಹಾಲು ಮತ್ತು ಹಾಲು ಉತ್ಪನ್ನದ ಪದಾರ್ಥಗಳ ಪೈಕಿ ಶೇ. ೬೮.೭ ರಷ್ಟು ಉತ್ಪಾದನೆಯು ಭಾರತೀಯ ಆಹಾರ ಭದ್ರತೆ ಹಾಗೂ ಗುಣಮಟ್ಟ ಪ್ರಾಧಿಕಾರ ಇವರ ಅಳತೆಯ ಪ್ರಕಾರ ಶುದ್ಧ ಇಲ್ಲ, ಅದೇ ರೀತಿ ಅದರಲ್ಲಿ ಡಿಟರ್ಜಂಟ್ ಪುಡಿ, ಕಾಸ್ಟಿಕ್ ಸೋಡಾ, ಗ್ಲುಕೋಜ್, ಬಿಳಿ ಬಣ್ಣ ಮತ್ತು ರಿಪೈನ್ಡ್ ಆಯಿಲ್ ಇತ್ಯಾದಿಗಳ ಕಲಬೆರಿಕೆಯಾಗುತ್ತಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾದ ಮೋಹನ ಸಿಂಗ್ ಅಹುಲುವಾಲಿಯಾ ಇವರ ವರದಿಯಲ್ಲಿ ನಮೂದಿಸಲಾಗಿತ್ತು.

ಮುಂಬೈಯಲ್ಲಿ ಹಾಲು ಮಾರಾಟ ಮಾಡುವವರು ಗಿರಾಕಿಗಳಿಗೆ ಬಹುತಾಂಶ ಶೇ ೭೮ ರಷ್ಟು ಕಳಪೆ ಗುಣಮಟ್ಟದ ಹಾಲನ್ನು ವಿತರಿಸಲಾಗುತ್ತಿದೆ ಎಂದು ವರದಿಯನ್ನು ‘ಕನ್ಜೂಮರ್ ಗೈಡೆನ್ಸ್ ಸೊಸೈಟಿ ಆಫ್ ಇಂಡಿಯಾ’ ಈ ಸಂಸ್ಥೆಯು ರಾಜ್ಯ ಹಾಗೂ ಕೇಂದ್ರ ಸರಕಾರದ ಗ್ರಾಹಕ ಸುರಕ್ಷಾ ಖಾತೆಯವರಲ್ಲಿ ಪ್ರಸ್ತುತ ಪಡಿಸಿದರು.

ಇದೇ ರೀತಿ ಮಹಾರಾಷ್ಟ್ರದಲ್ಲಿ ೨ ಲಕ್ಷ ಲೀಟರ್ ನೀರಿನಲ್ಲಿ ಕಲಬೆರಿಕೆಯನ್ನು ಮಾಡಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸ್ಪೋಟಕವಾದ ಮಾಹಿತಿ ಲಭ್ಯ ಇರುವಾಗ ಸರಕಾರ ಮತ್ತು ಆಡಳಿತವರ್ಗದವರು ಇದರ ಬಗ್ಗೆ ಏನೂ ಮಾಡುತ್ತಿಲ್ಲ.

ಹಾಲಿನಲ್ಲಿ ಮಾಡಲಾಗುತ್ತಿರುವ ಕಲಬೆರಿಕೆಯು ಜನರಿಗೆ ಮೋಸ ಹಾಗೂ ಮನುಷ್ಯನ ಆರೋಗ್ಯಕ್ಕೆ ಮಾರಕವಾಗಿರುವಾಗ ಇದನ್ನು ನಿಲ್ಲಿಸಲು ಸರಕಾರವು ಯಾವ ಹೆಜ್ಜೆಯನ್ನು ಇಟ್ಟಿದೆ ಎಂಬ ಪ್ರಶ್ನೆಯನ್ನು ವಿಚಾರಿಸುತ್ತ ಹಾಲಿನಲ್ಲಿ ಕಲಬೆರಿಕೆಯನ್ನು ಮಾಡುವವರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು, ಅದೇ ರೀತಿ ಹಾಲು ಉತ್ಪಾದನೆಯವರೊಂದಿಗೆ ಹೊಂದಾಣಿಕೆ ಇರುವ ಸರಕಾರವು ಆಹಾರ ಹಾಗೂ ಔಷಧಿಯ ಸರಕಾರಿ ವಿಭಾಗದಲ್ಲಿಯ ಅಧಿಕಾರಿ ಹಾಗೂ ಕಾರ್ಮಿಕರ ಮೇಲೆ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶೀ. ಚಂದ್ರ ಮೊಗೇರ್ ಇವರು ಇಂದು ಬೇಡಿಕೆಯನ್ನು ಮಾಡಿದರು.

ಈ ವಿಷಯದಲ್ಲಿ ಭಾರತಾದ್ಯಂತ ನಡೆಯಲಿರುವ ‘ರಾಷ್ಟ್ರೀಯ ಹಿಂದೂ ಆಂದೋಲನ’ ದಲ್ಲಿ ಅವರು ಮಾತನಾಡುತ್ತಿದ್ದರು. ಈ ಆಂದೋಲನವು ಮಂಗಳೂರಿನ ಮಹಾನಗರ ಪಾಲಿಕೆಯ ಕಛೇರಿಯ ಮುಂಭಾಗದಲ್ಲಿ ಮಾಡಲಾಯಿತು.

ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸುವಂತಹ ಪೈಪನ್ನು ಪಾರದರ್ಶಕ ಮಾಡುವಂತೆ ನಿಯಮವನ್ನು ತನ್ನಿರಿ !

ಹಾಲಿನಂತೆಯೇ ದೇಶದ ಬಹುತೇಕ ಸ್ಥಳಗಳಲ್ಲಿ ಪೆಟ್ರೋಲ್-ಡಿಝೆಲ್ ನ ಅಳತೆಯಲ್ಲಿ ಮೋಸಗೊಳಿಸುವುದು, ಕಲಬೆರಿಕೆಯುಕ್ತ ಅನಿಲವನ್ನು ಪೂರೈಸುವುದು ಇತ್ಯಾದಿ ವಿಷಯಗಳು ಸರಾಗವಾಗಿ ನಡೆಯುತ್ತಿದೆ. ಈ ಹಿಂದೆ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಈ ರಾಜ್ಯಗಳಲ್ಲಿ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ‘ಡಿಸ್ಪೆಸಿಂಗ್ ಯುನೀಟ್’ ನಲ್ಲಿ ಕಾನೂನು ಬಾಹಿರ ಬದಲಾವಣೆಯನ್ನು ಮಾಡಿ ಅಳತೆಯಲ್ಲಿ ಮೋಸವನ್ನು ಮಾಡುತ್ತಿದ್ದರು, ಅದೇ ರೀತಿ ಪೆಟ್ರೋಲ್‌ನಲ್ಲಿ ಕಲಬೆರಿಕೆಯಾಗಿರುವ ಬಗ್ಗೆ ಅನೇಕ ವರದಿಗಳು ಬಹಿರಂಗವಾಗಿದೆ.

ಇಂತಹ ಘಟನೆಗಳಿಂದ ಗ್ರಾಹಕರಲ್ಲಿ ಅಸುರಕ್ಷತೆಯು ಹಾಗೂ ಅವಿಶ್ವಾಸವು ನಿರ್ಮಾಣವಾಗಿದೆ, ಅದಕ್ಕಾಗಿ ಪೆಟ್ರೋಲ್ ಬಂಕಿನಲ್ಲಿ ಯಾವ ಪೈಪ್ ನಿಂದ ಪೆಟ್ರೋಲ್ ಅಥವಾ ಡಿಝೆಲ್ ವಾಹನದಲ್ಲಿ ತುಂಬಿಸಲಾಗುತ್ತದೆಯೋ, ಆ ಪೈಪ್ ಪಾರದರ್ಶಕವನ್ನಾಗಿ ಮಾಡಬೇಕು, ಇದರಿಂದ ನಿಜವಾಗಿ ಪೆಟ್ರೋಲ್ ಬರುತ್ತಿದೆಯೇ ಅಥವಾ ಇಲ್ಲವೇ, ಎಂಬುದು ಗ್ರಾಹಕರಿಗೆ ತಿಳಿಯುತ್ತದೆ, ಎಂಬ ಬೇಡಿಕೆಯನ್ನು ಈ ಸಮಯದಲ್ಲಿ ಮಾಡಲಾಯಿತು.

ಗ್ರಾಹಕರಿಗೆ ಮೋಸ ಹಾಗೂ ಕಲಬೆರಿಕೆಯನ್ನು ಮಾಡುವ ಪೆಟ್ರೋಲ್ ಬಂಕಿನ ಅನುಮತಿಯನ್ನು ರದ್ದು ಪಡಿಸಿ ಅವರ ಮೇಲೆ ಕಠಿಣವಾದ ಕ್ರಮವನ್ನು ಕೈಗೊಳ್ಳಿರಿ, ಎಂದು ಶ್ರೀ. ಮೊಗೇರ್ ಇವರು ಹೇಳಿದರು.