ಬೆಳಗಾವಿ: ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಗುಡಿಸಲು ಭಸ್ಮವಾಗಿ 10 ಹಸುಗಳು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಘಟನೆ ಸಂಭಿವಿಸಿದೆ.
ಬಾಬು ಪಾರೀಶ ಸಪ್ತಸಾಗರ ಎಂಬವರಿಗೆ ಸೇರಿದ 4 ಎಮ್ಮೆಗಳು, ಭರಮಪ್ಪ ಜಿನ್ನಪ್ಪಾ ಸಪ್ತಸಾಗರ 2 ಎಮ್ಮೆ ಗಳು, 2 ಆಕಳು ಹಾಗೂ ಧನಪಾಲ ಜಿನ್ನಪ್ಪಾ ಸಪ್ತಸಾಗರ 3 ಎಮ್ಮೆಗಳು ಬೆಂಕಿಗೆ ಆಹುತಿಯಾಗಿವೆ.
ವಿದ್ಯುತ್ ಇಲಾಖೆ ಹಳ್ಳೂರಿನ ಅಧಿಕಾರಿ ಸಿ ಬಿ ಒಂಟಗೋಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೇಲಾಧಿಕಾರಿಗೆ ವರದಿ ಸಲ್ಲಿಸಿ ರೈತರ ಹಾನಿಗೆ ಸೂಕ್ತವಾದ ಪರಿಹಾರ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿ ಎಚ್ ವೈ ತಾಳಿಕೋಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಲಕ್ಷಣ ಕತ್ತಿ ಹಾಗೂ ಬಾಳೆಶ ನೇಸೂರ ರೈತರಿಗೆ 20,000 ಸಾವಿರ ಹಣ ಸಹಾಯ ಧನ ಮತ್ತು ಜಿ.ಪಂ. ಸದಸ್ಯ ವಸಂತಿ ಹನುಮಂತ ತೇರದಾಳ ಅವರು ವೈಯಕ್ತಿಕವಾಗಿ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.
ಮೂಡಲಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.