Recent Posts

Tuesday, November 26, 2024
ಸುದ್ದಿ

ಐಎಎಫ್‍ಗೆ ಅತ್ಯಾಧುನಿಕ ಸಮರ ಸಾಮರ್ಥ್ಯದ ರಫೇಲ್ ಜೆಟ್ ಸೇರ್ಪಡೆಯಾದರೆ ಪಾಕಿಸ್ತಾನದ ಬಾಲ ಮುದುಡಿಕೊಳ್ಳುತ್ತದೆ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ವಾಯುಪಡೆಗೆ ರಫೇಲ್ ಫೈಟರ್ ಜೆಟ್‍ಗಳು ಸೇರ್ಪಡೆಯೊಂದಿಗೆ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ(ಐಬಿ)ಗಳಲ್ಲಿ ಪಾಕಿಸ್ತಾನದ ಬಾಲ ಮುದುಡಿಕೊಳ್ಳುತ್ತದೆ ಎಂದು ಐಎಎಪ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ.

ಭಾರತೀಯ ವಾಯು ಪಡೆಯ ಸಮರ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಬಿ.ಎಸ್ ಧನೋವಾ ಪುನರುಚ್ಚರಿಸಿದ್ದಾರೆ. ದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಎಎಫ್‍ಗೆ ಅತ್ಯಾಧುನಿಕ ಸಮರ ಸಾಮರ್ಥ್ಯದ ರಫೇಲ್ ಜೆಟ್ ಸೇರ್ಪಡೆಯಾದರೆ ಪಾಕಿಸ್ತಾನ ಅಥವಾ ಚೀನಾ ಎಲ್‍ಒಸಿ ಅಥವಾ ಎಲ್‍ಐಬಿಯ ಯಾವುದೇ ಪ್ರದೇಶದಲ್ಲಿ ಸುಳಿಯುವ ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

2020ರ ಸೆಪ್ಟೆಂಬರ್ ವೇಳೆಗೆ ಮೊದಲ ಕಂತಿನ ರಫೇಲ್ ಜೆಟ್ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ವಾಯುಪಡೆಗೆ ಸೇರ್ಪಡೆಯಾಗಲಿವೆ. ಇದರಿಂದ ಐಎಎಫ್‍ನ ಶಕ್ತಿ-ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಧನೋವಾ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು