ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ನಿಯಮದಲ್ಲಿ ಬದಲಾವಣೆಯಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಈಗ ಕೃಷಿಗೆ ಮಾತ್ರ ಸೀಮಿತವಾಗಿಲ್ಲ. ಮೋದಿ ಸರ್ಕಾರ ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಈ ಸೌಲಭ್ಯವನ್ನು ವಿಸ್ತರಿಸಿದೆ.
ಈ ಎರಡೂ ಕ್ಷೇತ್ರಗಳಿಗೆ ಎರಡು ಲಕ್ಷದವರೆಗೆ ಸಾಲ ಸಿಗಲಿದೆ. ಆದ್ರೆ ಕೃಷಿ ಕ್ಷೇತ್ರಕ್ಕೆ 3 ಲಕ್ಷದವರೆಗೆ ಸಾಲ ಸಿಗುತ್ತಿದೆ.
ಪಶುಸಂಗೋಪನೆ ಅಥವಾ ಮೀನುಗಾರಿಕೆ ಮಾಡುತ್ತಿರುವವರು ಕೂಡ ತಡಮಾಡದೆ ಬ್ಯಾಂಕ್ ಗೆ ಹೋಗಿ ಸಾಲ ಪಡೆಯಿರಿ.
ಕೇವಲ ಮೂರು ದಾಖಲೆ ಪತ್ರಗಳನ್ನು ನೀಡಿದ್ರೆ ಸಾಕಾಗುತ್ತದೆ. ಇದಕ್ಕೂ ಶೇಕಡಾ 4 ರಷ್ಟು ರಿಯಾಯಿತಿ ದರದ ಬಡ್ಡಿಯಲ್ಲಿ ಸಾಲ ಸಿಗಲಿದೆ.
ದೇಶದಲ್ಲಿ 14 ಕೋಟಿ ಕೃಷಿ ಕುಟುಂಬವಿದೆ. ಶೇಕಡಾ 50 ರಷ್ಟು ಕೃಷಿಕರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಇಷ್ಟು ದಿನ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಸುಲಭವಾಗಿರಲಿಲ್ಲ.
ಆದ್ರೆ ಇನ್ಮುಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಸುಲಭ. ಮೂರೇ ಮೂರು ದಾಖಲೆ ನೀಡಿ ಕಾರ್ಡ್ ಪಡೆಯಬಹುದಾಗಿದೆ.