Recent Posts

Tuesday, November 26, 2024
ಸುದ್ದಿ

ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯ: ತಾರಾನಾಥ ರೈ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರ. ಕಾಯಿಲೆಗಳು ದಿನೇದಿನೆ ಹೆಚ್ಚಾಗುತ್ತಿದೆ. ಈ ಕಾಯಿಲೆಯ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡರೆ ಹೆಚ್.ಐ.ವಿ. ಎಂಬುದು ಸಾಂಕ್ರಾಮಿಕ ರೋಗವಲ್ಲ.

ಈ ರೋಗದಲ್ಲಿ ಬಳಲುವವರಿಗೆ ಕೇವಲ ಔಷಧಿ ಇದ್ದರೆ ಸಾಲದು, ಚಿಕಿತ್ಸೆಗೆ ಬರುವ ರೋಗಿಗಳಿಗೆ, ಆಪ್ತ ಸಮಾಲೋಚನಕಾರನು ನೀಡುವ ಮಾನಸಿಕ ಸ್ಥೈರ್ಯ ಮುಖ್ಯವಾಗಿರುತ್ತದೆ ಎಂದು ಪುತ್ತೂರಿನ ಸರಕಾರಿ ಆಸ್ಪತ್ರೆಯ ಆಪ್ತಸಮಾಲೋಚನಾಕಾರ ತಾರಾನಾಥ ರೈ ಕುಂಬ್ರ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಮಂಗಳವಾರ ನಡೆದ “ಏಡ್ಸ್ ಬಗೆಗಿನ ಜಾಗೃತಿ”ಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು ಹೆಚ್.ಐ.ವಿ. ಯ ಬಗೆಗೆ ಸಂಪೂರ್ಣ ಮಾಹಿತಿಯ ಅರಿತು ಎಲ್ಲರಿಗೂ ಅಗತ್ಯವಾಗಿ ಬೇಕಾಗಿದೆ. ಹೆಚ್.ಐ.ವಿ. ಹರಡುವ ಬಗೆ, ರೋಗದ ಲಕ್ಷಣದ ಬಗೆ ಮಾಹಿತಿ ಇದ್ದರೆ ಸಮಾಜದಲ್ಲಿ ಹೆಚ್.ಐ.ವಿ. ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಲು ಸಾಧ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಪ್ತ ಸಮಾಲೋಚನಾಕಾರನು ಗೌಪ್ಯತೆಯನ್ನು ಕಾಪಾಡುವುದು ಮುಖ್ಯವಾಗಿರುತ್ತದೆ. ಈ ಗೌಪ್ಯತೆಯು ವ್ಯಕ್ತಿಯ ಆಯಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್.ಐ.ವಿ. ಪೀಡಿತರಿಗೆ ಆತ್ಮ ವಿಶ್ವಾಸವನ್ನು ತುಂಬುವ ಕೆಲಸವಾಗಬೇಕು. ಮತ್ತು ಈ ಕಾಯಿಲೆಗೆ ಸಮರ್ಪಕವಾದ ಔಷಧಿಯು ಇನ್ನು ವೈದಕೀಯ ಕ್ಷೇತ್ರಕ್ಕೆ ಬಂದಿಲ್ಲ. ಆದರೆ ರೋಗ ಪೀಡಿತರ ಆಯಸ್ಸಿನ ಕಾಲಾವಧಿಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು ಎಂದು ತಿಳಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ. ಶ್ರೀಧರ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್.ಐ.ವಿ. ಎಂಬುದು ಭಯಾನಕ ಕಾಯಿಲೆಯಲ್ಲ. ಇತ್ತೀಚಿನ ದಿನಗಳಲ್ಲಿ ಮಾಹಿತಿಯ ಕೊರತೆಯಿಂದಾಗಿ ಹೆಚ್.ಐ.ವಿ. ಪೀಡಿತ ವ್ಯಕ್ತಿಯನ್ನು ಕೀಳರಿಮೆ ಮತ್ತು ತಾತ್ಸಾರ ಭಾವನೆಯಿಂದ ಕಾಣುವವರು ಸಮಾಜದಲ್ಲಿ ಇದ್ದಾರೆ.

ಇದು ರೋಗಿಯ ಮಾನಸಿಕ ಸ್ಥೈರ್ಯ ವನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ಹೆಚ್.ಐ.ವಿ.ಯ ಕುರಿತು ಸಮರ್ಪಕವಾದ ಮಾಹಿತಿಯನ್ನು ತಲುಪಿಸುವ ಕಾರ್ಯ ನಡೆಯಬೇಕು. ಸಮಾಜದ ಬೆಳವಣಿಗೆಯಲ್ಲಿ ಯುವ ಜನತೆಯು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀನಾಥ್ ಸ್ವಾಗತಿಸಿದರು. ರಾಷ್ಟ್ರೀಯ ಯೋಜನಾಧಿಕಾರಿ ಅನಿತಾ ಕಾಮತ್ ವಂದಿಸಿ, ವಿದ್ಯಾರ್ಥಿನಿ ಗೀತಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.