ಕೊಲ್ಕತ್ತಾ: ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ತೃಣಮೂಲ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ರಾಹುಲ್ ಗಾಂಧಿ, ಒಬ್ಬ ಪುಟ್ಟ ಬಾಲಕ’ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.
ಕೆಲವು ತಿಂಗಳ ಮೊದಲು ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಪರಸ್ಪರ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಇವರಿಬ್ಬರು ಭಿನ್ನವಾಗಿ ಸ್ಪರ್ಧಿಸುತ್ತಿದ್ದು, ಟೀಕಾ ಪ್ರಹಾರ ಮಾಡುತ್ತಿದ್ದಾರೆ.
ಪುಟ್ಟ ಬಾಲಕನೊಬ್ಬ ಏನಾದರೂ ಹೇಳಿದರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಮಮತಾ ಹೇಳಿದರು.
ಟಿಎಂಸಿ ಸೇರಿದ ಕಾಂಗ್ರೆಸ್ ನ ಸಂಸದೆ ಮೌಸಮ್ ಬೆನಜೀರ್ ನೂರ್ ಅವರನ್ನು ಟೀಕಿಸಿದ್ದ ರಾಹುಲ್ ಗಾಂಧಿ, ಪಕ್ಷ ತೊರೆದು ಮೋಸ ಮಾಡಿದ ಸಂಸದೆಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಜನರಲ್ಲಿ ಆಗ್ರಹಿಸಿದ್ದರು.