Sunday, January 19, 2025
ಸುದ್ದಿ

ನಂ.22ರಂದು ‘ಸ್ವಚ್ಛ ಪುತ್ತೂರು’ ಅಭಿಯಾನದ ಎರಡನೆಯ ವರುಷದ ಕೆಲಸಗಳ ಪೂರ್ವಭಾವಿ ಸಭೆ

ಪುತ್ತೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಸ್ವಚ್ಛ ಪುತ್ತೂರು ಅಭಿನಾಯನವು ನಡೆದಿತ್ತು. ಈಗ ಎರಡನೇ ವರ್ಷದ ಸ್ವಚ್ಛ ಪುತ್ತೂರು ಅಭಿಯಾನದ ಪೂರ್ವಭಾವಿ ಸಭೆಯು ದಿನಾಂಕ 22-11-2017ರ ಸಾಯಂಕಾಲ 6.00 ಗಂಟೆಗೆ ಕಲ್ಲಾರೆ ರಾಘವೇಂದ್ರ ಮಠದಲ್ಲಿ ರಾಮಕೃಷ್ಣ ಮಠದ ಪೂಜ್ಯ ಏಕಗಮ್ಯಾನಂದಜೀ ಮಹರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವುದು.ಪುತ್ತೂರಿನ ಎಲ್ಲ ಸಮಾಜಮುಖೀ ಸಂಘಟನೆಗಳ ಸದಸ್ಯರೂ ಅಪೇಕ್ಷಿತರು.ಬನ್ನಿ, ಕೈ ಜೋಡಿಸಿ.ಶೀಘ್ರದಲ್ಲೇ ಆರಂಭಗೊಳ್ಳಲಿರುವ ಸ್ವಚ್ಛ ಪುತ್ತೂರಿನ ಎರಡನೆಯ ವರುಷದ ಅಭಿಯಾನವು ಯಶಸ್ವಿಯಾಗಿ ನಡೆಯಲು ಸಲಹೆಗಳನ್ನು ಕೊಡಿ ಎಂದು ಸ್ವಚ್ಛ ಪುತ್ತೂರು ಅಭಿಯಾನದ ಸಂಯೋಜಕ ಶ್ರೀಕೃಷ್ಣ ಉಪಾಧ್ಯಾಯ ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response