ಸುಳ್ಯ: ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ತುಂಬೆ ನಿನ್ನೆ ಸುಳ್ಯ ವಿಧಾನಸಭಾ ವ್ಯಾಪ್ತಿಯ ಜಾಲ್ಸೂರು, ಅಡ್ಕಾರ್, ಪೈಚಾರ್, ಸುಳ್ಯ, ಪೆರಾಜೆ, ಮೊದಲಾದ ಕಡೆ ಸಂಚರಿಸಿದರು.
ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಬಿಜೆಪಿಯದ್ದು ಕೋಮುವಾದಿ ರಾಜಕಾರಣವಾದರೆ ಕಾಂಗ್ರೆಸ್ನದ್ದು ಸೋಗಿನ ಜಾತ್ಯಾತೀತವಾಗಿದೆ.
ಬಿಜೆಪಿ ಕೊಲೆ ರಾಜಕೀಯ, ಶವ ರಾಜಕೀಯ ಮಾಡುವಾಗ ಕಟು ಶಬ್ದಗಳಿಂದ ಖಂಡಿಸಬೇಕಾಗಿದ್ದ ಕಾಂಗ್ರೆಸ್ ಸುಮ್ಮನೆ ಇದ್ದುಕೊಂಡು ಕೋಮುವಾದ ಜಾಸ್ತಿಯಾಗುವ ರೀತಿಯಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುತ್ತಿದೆ ಎಂದರು.