Tuesday, January 21, 2025
ರಾಜಕೀಯಸುದ್ದಿ

ಮೋದಿ ವಿರುದ್ಧ ಕೇಜ್ರಿವಾಲ್ ರಾಜಕೀಯ ಕಿಡಿ – ಕಹಳೆ ನ್ಯೂಸ್

ದ್ವೇಷ ಹರಡುವ ಮೋದಿಯನ್ನ ಸೋಲಿಸಿದರೆ, ದೇಶದಲ್ಲಿ ಶಾಂತಿ ನೆಲೆಸುತ್ತೆ. ಅದಕ್ಕಾಗಿ ಈ ಸಾರಿ ಅವರನ್ನ ಮನೆಗೆ ಕಳುಹಿಸಿ ಎಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು

ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಪರ ಪ್ರಚಾರ ನಡೆಸಿದ ಕೇಜ್ರಿವಾಲ್, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ದೇಶದ ವ್ಯಾಪಾರಿ ಸಮುದಾಯಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತಿತರ ಯೋಜನೆಗಳಿಂದ ಎಷ್ಟೋ ಮಂದಿ ತಮ್ಮ ವ್ಯಾಪಾರವನ್ನೇ ಸ್ಥಗಿತಗೊಳಿಸಬೇಕಾಯ್ತು. ನಿರುದ್ಯೋಗ ಹಾಗೂ ರೈತರ ಸಮಸ್ಯೆಗಳನ್ನು ಉಲ್ಬಣಗೊಂಡವು ಎಂದು ಕುಟುಕಿದರು. ಆಂಧ್ರಪ್ರದೇಶದಲ್ಲಿ ನಡೆಯುವ ಚುನಾವಣೆ ಇಡೀ ದೇಶಕ್ಕೆ ಮಹತ್ವದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಬಾಬು ನಾಯ್ಡು ಅವರನ್ನು ಗೆಲ್ಲಿಸಿದರೆ, ಸ್ಥಳೀಯ ಪಕ್ಷಗಳು ಸೇರಿ ಕೇಂದ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯವಾಗುತ್ತದೆ ಎಂದು ಮತಯಾಚನೆ ಮಾಡಿದರು.