Tuesday, January 21, 2025
ರಾಜಕೀಯಸುದ್ದಿ

ಸ್ವಾತಿ ನಕ್ಷತ್ರ ನನ್ನದು, ಐಟಿ ದಾಳಿ ಮಾಡಿಸಿದವರಿಗೇ ಅದು ಉಲ್ಟಾ ಆಗುತ್ತೆ: ಸಚಿವ ಹೆಚ್.ಡಿ ರೇವಣ್ಣ – ಕಹಳೆ ನ್ಯೂಸ್

ಹಾಸನ: ನನ್ನದು ಸ್ವಾತಿ ನಕ್ಷತ್ರ, ಐಟಿ ಶಾಕ್ ನೀಡಲು ಹೋದ್ರೆ, ಮಾಡಿಸಿದವರಿಗೆ ಉಲ್ಟಾ ಆಗುತ್ತದೆ ಎಂದು ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ ರೇವಣ್ಣ, ಸುಧೀರ್ಘ 60 ವರ್ಷದ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಲೋಕಾಯುಕ್ತ, ಸಿಒಡಿ, ಸಿಬಿಐ ಎಲ್ಲ ತನಿಖೆ ನೋಡಿದೆ. ಯಾವುದಕ್ಕೂ ಹೆದರಿ ಓಡುವುದಿಲ್ಲ

ನಮ್ಮ ಮನೆದೇವರು ಈಶ್ವರ, ಆರಾಧ್ಯ ದೇವಿ ಶೃಂಗೇರಿ ಶಾರದೆ. ನನ್ನದು ಸ್ವಾತಿ ನಕ್ಷತ್ರ, ನಮ್ಮ ಕುಟುಂಬಕ್ಕೆ ದಾಳಿ, ಮಾಟ, ಮಂತ್ರ ಯಾವುದೂ ತಟ್ಟಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಸನ ಹಾಗೂ ರಾಮನಗರದಲ್ಲಿ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ದೇವೇಗೌಡರು ಹೆದರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದಲ್ಲಿ ಏನೇನೆಲ್ಲ ನಡಿತಿದೆ ಎಂದು ಜನ ನೋಡುತ್ತಿದ್ದಾರೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.