Monday, January 20, 2025
ರಾಜಕೀಯಸುದ್ದಿ

ನಮ್ಮತ್ತ ಬೆಟ್ಟು ಮಾಡುವ ಬೆರಳನ್ನು ಕತ್ತರಿಸುವೆವು: ಬಿಜೆಪಿ ಅಭ್ಯರ್ಥಿ ಕಠಾರಿಯಾ ವಿವಾದ – ಕಹಳೆ ನ್ಯೂಸ್

ಬಿಜೆಪಿ ಮತ್ತು ಅದರ ಸದಸ್ಯರತ್ತ ತೋರಲಾಗುವ ಬೆರಳನ್ನು ನಾವು ಕತ್ತರಿಸಿ ಹಾಕುತ್ತೇವೆ’ ಎಂದು ರಾಷ್ಟ್ರೀಯ ಎಸ್‌ಸಿ ಆಯೋಗದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ರಾಮ್ ಶಂಕರ್ ಕಠೇರಿಯಾ ಹೇಳಿರುವ ಮಾತುಗಳು ಈಗ ವ್ಯಾಪಕ ಟೀಕೆ, ವಿವಾದ ಹಾಗೂ ಖಂಡನೆಗೆ ಗುರಿಯಾಗಿದೆ.

ಇವತ್ತು ನಮ್ಮ ಸರಕಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿದೆ; ಆದುದರಿಂದ ನಮ್ಮನ್ನು ದೂರಿ ತೋರುವ ಬೆರಳನ್ನು ನಾವು ಕತ್ತರಿಸಿ ಹಾಕುತ್ತೇವೆ” ಎಂದು ಕಠೇರಿಯಾ ಅವರು ಇಟಾವಾದಲ್ಲಿನ ಚುನಾವಣಾ ರ‍್ಯಾಲಿಯಲ್ಲಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಯಾವತಿ ಸರಕಾರದಡಿ ತನ್ನ ಹಾಗೂ ಬಿಜೆಪಿಯ ಇತರ ನಾಯಕರ ವಿರುದ್ಧ ದಾಖಲಿಸಲಾದ ಕೇಸುಗಳನ್ನು ಉಲ್ಲೇಖೀಸಿದ ಕಠೇರಿಯಾ, “ಮಾಯಾವತಿ ಅವರು ನನ್ನ ವಿರುದ್ಧ ಅನೇಕ ಕೇಸುಗಳನ್ನು ಹಾಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ನಾನು ಅವುಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಅಂತೆಯೇ ಆಕೆಗೆ ನನ್ನನ್ನು ಜೈಲಿಗೆ ಹಾಕಲು ಈ ವರೆಗೂ ಸಾಧ್ಯವಾಗಿಲ್ಲ” ಎಂದು ಹೇಳಿದರು. ಸದ್ಯ ಈ ಮಾತುಗಳು ರಾಜಕೀಯದ ಅಂಗಳದಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿದೆ.