Monday, January 20, 2025
ಸುದ್ದಿ

ದುಡ್ಡು ಇಸ್ಕೋಳಿ, ಚೆನ್ನಾಗಿ ತಿಂದು ಬಿಜೆಪಿಗೆ ಓಟು ಹಾಕಿ: ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡರಿಂದ ವಿವಾದತ್ಮಕ ಹೇಳಿಕೆ – ಕಹಳೆ ನ್ಯೂಸ್

ತುಮಕೂರು: ಜೆಡಿಎಸ್‌ನವರು ಮೋಸ ಮಾಡ್ತಾರೆ, ನನ್ನ ಮಕ್ಕಳು ಜೆಡಿಎಸ್‌ನವನ್ನು ಹೆದರಿಸಿ ಅಂತ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಅವರು ತಮ್ಮ ಪಕ್ಷದವರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ.ಇದೇ ವೇಳೆ ಅವರು ಜೆಡಿಎಸ್ ನವರು ಕೌರವ ವಂಶಸ್ಥರು, ಅವರ ವಿರುದ್ದ ಯುದ್ದ ಮಾಡಬೇಕಾದ್ರೆ, ಅವರ ವಿರುದ್ದ ಯುದ್ದ ಮಾಡೋಣ, ನಾನು ಇರುವೆ, ನನಗೆ ಗೊತ್ತು ಅವರನ್ನು ಹೇಗೆ ಹೆದರಿಸಬೇಕು ಅಂತ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋದಲ್ಲಿ ಅವರು ನೇರವಾಗಿ ಹಾಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರ ವಿರುದ್ದ ಹರಿಹಾಯ್ದಿದ್ದು, ನಮ್ಮ ತೆರಿಗೆ ದುಡ್ಡನ್ನು ನಮಗೆ ಹಂಚುತ್ತಾರೆ ಅವನು ಮನೆಯಿಂದ ತಂದು ನೀಡುವುದಿಲ್ಲ, ನೀವು ತಿನ್ನಿ, ತಿಂದು ಬಿಜೆಪಿಗೆ ಮತ ಹಾಕಿ ಅಂತ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಡಿಎಸ್ ನವರು ಯಾರೇ ಬಂದ್ರು ಊರಿನ ಹೊರಗೆ ಬಿಡಬೇಡಿ, ನೀರಿನ ಕಳ್ಳ, ನೀರಿನ ಕಳ್ಳ ಅಂತ ಕೂಗಿ ದೊಣ್ಣೆ ಹಿಡಿದು ಕೊಂಡು ನಿಂತುಕೊಳ್ಳಿ ನಾನು ಯುದ್ದ ಮಾಡಿ ಅಂತ ಹೇಳಿದ್ದಾರೆ. ಇನ್ನು ಸುರೇಶ್ ಗೌಡರ ಮಾತು ಈಗ ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದವರು ಕಿಡಿಕಾರುತ್ತಿದ್ದಾರೆ.