Recent Posts

Monday, January 20, 2025
ಸುದ್ದಿ

ವಾರಂಟ್ ಆಸಾಮಿ ಕೆ ಎನ್ ನಾಗೇಗೌಡ ಎಂಬಾತನ ಬಂಧನ – ಕಹಳೆ ನ್ಯೂಸ್

ವಂಚನೆ ಪ್ರಕರಣ ಸೇರಿದಂತೆ ಕರ್ನಾಟಕ ರಾಜ್ಯ ಹಲವು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುಮಾರು 50 ಕ್ಕೂ ಮಿಕ್ಕ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಪೆರಿಯಡ್ಕ ಎಂಬಲ್ಲಿ ವಾಸವಾಗಿರುವ ಕೆ.ಎನ್ ನಾಗೇಗೌಡ, ಎಂಬಾತನ ವಿರುದ್ದ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳ ನ್ಯಾಯಾಲಯಗಳಿಂದ ಎನ್.ಐ ಆಕ್ಟ್ ಪ್ರಕಾರ ವಾರಂಟ್‌ಗಳು ಮೇಲಾಧಿಕಾರಿಗಳ ಮುಖಾಂತರ ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದ್ರಿ ವಾರಂಟ್ ಕಾರ್ಯಗತ ಬಗ್ಗೆ ಸದ್ರಿಯಾತನ ಮನೆ ಹಾಗೂ ಇತರೇ ಕಡೆಗಳಲ್ಲಿ ಪತ್ತೆ ಬಗ್ಗೆ ಪ್ರಯತ್ನಿಸಿದ್ದಲ್ಲಿ ತಲೆಮರೆಸಿಕೊಂಡಿದ್ದು, ವಾರಂಟ್ ದಸ್ತಗಿರಿಗೆ ಅನಾನೂಕೂಲವಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿಯಾತನ ಪೂರ್ವಾಪರಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿ ಈತನು ತನ್ನ ಹೆಂಡತಿ ಪದ್ಮಲತಾ ಜೊತೆಗೂಡಿ ಉಪ್ಪಿನಂಗಡಿಯ ಪೆರಿಯಡ್ಕ ಎಂಬಲ್ಲಿ ಮಾನ್ಯ ಮಲ್ಟಿ ಪರ್ಪಸ್ ಡೆವಲಪ್ ಮೆಂಟ್ ಸರ್ವೀಸ್ ಟ್ರಸ್ಟ್ [ರಿ] ಎಂಬ ಹೆಸರಿನ ಟ್ರಸ್ಟ್ನ್ನು ತೆರೆದುಕೊಂಡು ಸಾರ್ವಜನಿಕರಿಗೆ ಟ್ರಸ್ಟ್ನ ಹೆಸರಿನಲ್ಲಿ ಹಣ ಕೊಡಿಸುವುದಾಗಿ ದೇಣಿಗೆ ರೂಪದಲ್ಲಿ ಹಣವನ್ನು ಪಡೆದು ಚೆಕ್‌ನ್ನು ನೀಡಿ ಹಣವನ್ನು ಮರುಪಾವತಿಸದೇ ಮೋಸ ಮಾಡುತ್ತಿದ್ದನು.

ಅಲ್ಲದೇ ರಾಜ್ಯದ ಹಲವಾರು ಕಡೆಗಳಲ್ಲಿ ಕೆಲಸ ತೆಗೆಸಿಕೊಡುವುದಾಗಿ, ಜಾಗ ಮಾರಾಟ ಸರಕಾರಿ ಉದ್ಯೋಗ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು, ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಾರ್ವಜನಿಕರ ವಲಯದಿಂದ ಬಂದಿದ್ದು, ಜೊತೆಗೆ ಸಾರ್ವಜನಿಕರಲ್ಲಿ ಹಣವನ್ನು ಟ್ರಸ್ಟ್ ನಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣವನ್ನು ಪಡೆದು, ಜನರಿಗೆ ಹಣವನ್ನು ಮರುಪಾವತಿಸದೇ ವಂಚಿಸುತ್ತಿದ್ದು, ಇದರಿಂದ ಮೋಸಗೊಂಡ ರಾಜ್ಯದ ಹಲವಾರು ಜನರು ವಿವಿಧ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಿಸಿ ಸದ್ರಿ ನ್ಯಾಯಾಲಯಗಳಿಂದ ಎನ್‌ಐ ಆಕ್ಟ್ ಪ್ರಕಾರ ವಾರಂಟ್/ಸಮನ್ಸ್ಗಳು ಬಂದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಅಲ್ಲದೆ ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಳ್ಳುವ ಸ್ವಭಾವದವನಾಗಿರುತ್ತಾನೆ.

ಈತನು ಹೆಚ್ಚಾಗಿ ಬೆಂಗಳೂರುನಲ್ಲಿ ಐಷಾರಾಮಿ ಪ್ಲಾಟ್ ನಲ್ಲಿದ್ದು ಕ್ಕೊಂಡು ಹಾಲಿ ಹಾಗೂ ಮಾಜಿ ಪ್ರಭಾವಿ ರಾಜಕಾರಣಿಗಳ ಆಪ್ತ, ಹಾಗೂ ಉನ್ನತ ಮಟ್ಟದ ಅಧಿಕಾರಿಗಳು, ಹಾಗೂ ರೀಯಲ್ ಎಸ್ಟೇಟ್ ಉದ್ಯಮಿಗಳು, ದೊಡ್ಡ ದೊಡ್ಡ ಉದ್ಯಮಿಗಳ ಹೆಸರನ್ನು ಹೇಳಿ ಪ್ರಭಾವ ಬಳಸಿಕೊಂಡು ಜನರಿಗೆ ಮೋಸ ವಂಚನೆ ಮಾಡುತ್ತಿದ್ದನು.

ಈತನ ದಸ್ತಗಿರಿ ಬಗ್ಗೆ ಮೇಲಾಧಿಕಾರಿಗಳ ಮುಖಾಂತರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸುಳ್ಯ ನ್ಯಾಯಾಲಯದಿಂದ ಒಂದು ವಾರಂಟ್, ಪುತ್ತೂರು ನ್ಯಾಯಲಯದಿಂದ 04 ವಾರಂಟ್, ಹಾಸನ ನ್ಯಾಯಾಲಯದಿಂದ 02 ವಾರಂಟ್, ಶಿವಮೊಗ್ಗ ನ್ಯಾಯಾಲಯದಿಂದ 02 ವಾರಂಟ್, ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ಳಾರೆ , ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳ ವಾರಂಟ್ ಇದ್ದು, ಅಲ್ಲದೇ ಈತನ ವಿರುದ್ದ ಕರ್ನಾಟಕ ರಾಜ್ಯದ ವಿವಿದ ನ್ಯಾಯಾಲಯದಲ್ಲಿ ಹಲವಾರು ಸಿವಿಲ್ ಪ್ರಕರಣಗಳು ಅಲ್ಲದೇ ಹಲವಾರು ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳ ವಾರಂಟ್ ಗಳು ಇರುತ್ತದೆ.

ಸದ್ರಿ ವಾರಂಟ್ ಆಸಾಮಿಯ ದಸ್ತಗಿರಿ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಪ್ರೊಭೆಶನರಿ ಸಹಾಯಕ ಪೊಲೀಸ್ ಅಧೀಕ್ಷರಾದ ಪ್ರದೀಪ್ ಗುಂಟಿ ಐಪಿಎಸ್, ಪಿಎಸ್‌ಐ ನಂದಕುಮಾರ್ ಎಂ ಎಂ, ಪ್ರೊಬೆಶನರಿ ಪಿಎಸ್‌ಐ ಪವನ್ ನಾಯಕ್ ಹಾಗೂ ಸಿಬ್ಬಂಧಿಗಳಾದ ಹರಿಶ್ಚಂದ್ರ, ಇರ್ಷಾದ್, ದ.ಕ ಜಿಲ್ಲಾ ಗಣಕಯಂತ್ರ ಸಿಬ್ಬಂಧಿಗಳಾದ ಸಂಪತ್ ಹಾಗೂ ದಿವಾಕರ್ ರವರುಗಳು ಸಹಕರಿಸಿರುತ್ತಾರೆ.