Recent Posts

Monday, January 20, 2025
ಸಿನಿಮಾಸುದ್ದಿ

‘ಉರಿ ಕಮಾಂಡೋ ಮೇಲೆ ಮಿಲ್ಕಿ ಬ್ಯೂಟಿ ಕಣ್ಣು’ – ಕಹಳೆ ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಿಕ್ಕ ಪಟ್ಟೆ ಬ್ಯೂಸಿ ಆಗಿದ್ದಾರೆ. ಬಾಹುಬಲಿ ಚಿತ್ರದ ನಂತರ ಸಿನಿ ಕೆರಿಯರ್‌ನಲ್ಲಿ ಮರುಹುಟ್ಟು ಪಡೆದ ಮಿಲ್ಕಿ ಬ್ಯೂಟಿಗೆ ಕೈತುಂಬ ಆಫರ್‌ಗಳಿವೆ. ಆದರೆ ಯಾವ ಸಿನೆಮಾವನ್ನು ಒಪ್ಪಿಕೊಳ್ಳಬೇಕು,ಯಾವ ಸಿನೆಮಾವನ್ನು ಬಿಡಬೇಕು ಅನ್ನೊದನ್ನ ಯೋಚಿಸೋಕು ಟೈಮ್ ಇಲ್ಲವಾಗಿದೆಯಂತೆ. ಇಷ್ಟೊಂದು ಬ್ಯುಸಿಯಾಗಿರುವ ತಮನ್ನಾ ಸಾಧ್ಯವಾದಷ್ಟು ಬಿಟೌನ್ ಕಡೆಗೇ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದ್ರೆ ಈ ಮಿಲ್ಕ್ ಬ್ಯೂಟಿ ಬಾಲಿವುಡ್ ನಟ ವಿಕ್ಕಿ ಕೌಶಲ್‌ನ ಮೇಲೆ ಕಣ್ಣಿಟ್ಟಿದ್ದಾರೆ.

ಹೌದು, ಇತ್ತೀಚಿಗಷ್ಟೇ ಆಂಗ್ಲಪತ್ರಿಕೆಯೊಂದಿಗೆ ಸಂದರ್ಶನ ಕೊಟ್ಟಿರುವ ತಮನ್ನಾ. ಈ ವೇಳೆ ನೀವು ಯಾರ್ ಜತೆ ಡೇಟಿಂಗ್ ಮಾಡ್ತೀರಾ ಅನ್ನೋ ಪ್ರಶ್ನೆಯನ್ನ ಕೇಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣವೇ ರಿಯಾಕ್ಟ್ ಮಾಡಿದ ಅವರು ವಿಕ್ಕಿ ಕೌಶಲ್ ಅವರ ಹೆಸರನ್ನು ಹೇಳಿಬಿಟ್ಟರು. ತಮನ್ನಾ ಈ ಮೊದಲು ರಾಣಾ ದಗ್ಗುಬಾಟಿಯಂದ್ರೇ ತುಂಬಾ ಇಷ್ಟವೆಂದಿದ್ದರು. ಇವರಿಬ್ಬರು ಬಾಹುಬಲಿ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಈಗ ಬಾಲಿವುಡ್ ನಟ ವಿಕ್ಕಿ ಕೌಶಲ್ ಜತೆ ಡೇಟಿಂಗ್ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೌಶಲ್, ಉರಿ ಚಿತ್ರದ ನಟ. 200 ಕೋಟಿ ಬಾಚಿಕೊಂಡು, ದೇಶ್ಯಾದ್ಯಂತ ಸುದ್ದಿ ಮಾಡಿದ್ದ ಈ ಚಿತ್ರದಲ್ಲಿ ವಿಕ್ಕಿ ಸಖತ್ ಆಗಿಯೇ ನಟಿಸಿದ್ದರು. ಉರಿ ಚಿತ್ರದ ”How is josh” ಡೈಲಾಗಂತೂ ತುಂಬಾ ಫೇಮಸ್ ಆಗಿತ್ತು.

ಅದರೊಂದಿಗೆ ವಿಕ್ಕಿ ಕೂಡ ಬಹುಬೇಡಿಕೆಯ ನಟನಾದರು. ಈಗ ಈ ಕಮಾಂಡೋ ಮೇಲೆ ಮಿಲ್ಕಿ ಬ್ಯೂಟಿಯ ಕಣ್ಣು ಬಿದ್ದಿದ್ದು ಮುಂದೆನಾಗುತ್ತೆ ಅನ್ನೊದನ್ನ ಕಾದುನೋಡಬೇಕಷ್ಟೇ.