Monday, January 20, 2025
ಸುದ್ದಿ

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ದೀಪಪ್ರದಾನ ಕಾರ್ಯಕ್ರಮ – ಕಹಳೆ ನ್ಯೂಸ್

ಭಾರತ ಸನಾತನ ದೇಶ, ಕಳೆದ 5 ವರ್ಷಗಳಿಂದ ನಾಯಕನಾಗಿ ಭಾರತ ಎದ್ದು ನಿಂತಿದೆ, ಈ ಶಾಲೆಯಲ್ಲಿ ಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆ ತನ್ನ ಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆ. ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ತಾನು ಕಲಿತ ಮೌಲ್ಯವನ್ನು, ಸಂಸ್ಕಾರವನ್ನು ಪೌಢ ಶಿಕ್ಷಣಕ್ಕೆ ತೆರಳುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳು ದೀಪ ಪ್ರದಾನವನ್ನು ಕಿರಿಯ ವಿದ್ಯಾರ್ಥಿಗಳಿಗೆ ಮಾಡುವುದು ಈ ಕಾರ್ಯಕ್ರಮದ ಮೂಲ ಚಿಂತನೆಯೆಂದು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅದ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.

ದಿನಾಂಕ 26.03.2019ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ವೇದವ್ಯಾಸ ಧ್ಯಾನಮಂದಿರದಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಒಂದು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಮಹತ್ವವನ್ನು ಪಡೆಯುತ್ತದೆ. ಈ ವಿದ್ಯಾಕೇಂದ್ರದಲ್ಲಿ ಕಲಿಸುವ ರೀತಿ ನನಗೆ ಆಶ್ಚರ್ಯ ತಂದಿದೆ. ಪ್ರೀತಿ, ಶ್ರದ್ದೆ, ಧರ್ಮ, ಎಂಬ ಸನಾತನದ ಮೂಲ ಶಿಕ್ಷಣವನ್ನು ಕೊಟ್ಟಾಗ ದೇಶ ಕಂಡ ಕನಸು ನನಸಾಗುತ್ತದೆ. ಯಾವುದೇ ಹಂತದಲ್ಲೂ ಶಿಕ್ಷಣವನ್ನೂ ಮೊಟಕುಗೊಳಿಸದೆ ಮುಂದುವರಿಸಿ ಶಾಲೆಗೆ, ದೇಶಕ್ಕೆ ಕೀರ್ತಿ ತರಬೇಕೆಂದು ಶ್ರೀ ಆನಂದ್ ಕುಂದರ್ ಪ್ರವರ್ತಕರು ಗೀತಾನಂದ ಫೌಂಡೇಶನ್. ಕೋಟಾ, ಇವರು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ. ವಿ. ಯೋಗೇಂದ್ರ ಮಾತನಾಡುತ್ತಾ ಕನ್ನಡ ಮಾದ್ಯಮದಲ್ಲಿ ಕಲಿತವರಿಗೆ ಸಾಧನೆ ಮಾಡಲು ಸಾದ್ಯವಿಲ್ಲ ಎನ್ನುವ ಕಲ್ಪನೆ ತಪ್ಪು. ಸಂಸ್ಕೃತಿ ಅಂದಾಗ ಭಾಷೆನು ಒಂದು ಸಂಸ್ಕೃತಿ ಇದು ಆಂಗ್ಲ ಮಾದ್ಯಮ ಶಾಲೆಯಲ್ಲಿ ದೊರಕುವುದು ಕಷ್ಟ. ಕನ್ನಡ ಮಾದ್ಯಮದಲ್ಲಿ ಇಂತಹ ಸಂಸ್ಕೃತಿ ಸಿಗುತ್ತದೆ ಇದಕ್ಕೆ ನೀವು ಸಾಕ್ಷಿಯಾಗಿದ್ದಿರಿ, ನಿಮ್ಮ ಬಾಳು ಹಸನಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಕಾಶ್ ಶೆಟ್ಟಿಯವರು ಮಾತಾನಾಡುತ್ತಾ “ ಎಲ್ಲಿಯು ಕಾಣದ ದೇವರನ್ನು ಎಲ್ಲೆಲ್ಲಿ ಹುಡುಕಬೇಡಿ, ಒಮ್ಮೆ ಶ್ರೀರಾಮ ಶಾಲೆಗೆ ಭೇಟಿ ನೀಡಿ. ಇಲ್ಲಿರುವಂತಹ ಶಿಕ್ಷಣ ಇಡೀ ದೇಶದಲ್ಲಿ ಜಾರಿಗೊಳಿಸಿದರೆ ಆಗ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಈ ದೇಶಕ್ಕೆ ಏನೂ ಬೇಕು ಆ ಕೆಲಸವನ್ನು ನಾವು ಮಾಡಿದಾಗ ತಾಯಿ ಭಾರತಿ ಪುನೀತಳಾಗುತ್ತಾಳೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. 7ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ , ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು. ಕಿರಿಯ ವಿದ್ಯಾರ್ಥಿಗಳು ಪೌಢ ಶಾಲೆಗೆ ಹೊರಟು ನಿಂತಿರುವ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು. ನಂತರ 7ನೇ ತರಗತಿಯ ವಿದ್ಯಾರ್ಥಿಗಳ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮವನ್ನು ಕುಶಿ.ಎ.ಪೂಜಾರಿ ನಿರೂಪಿಸಿ, ಶಿಕ್ಷಕರಾದ ಸುಮಂತ್ ಆಳ್ವರವರು ಸ್ವಾಗತಿಸಿದರು, ಅನಘ.ಯು.ವಿ.ಭಟ್ ದನ್ಯವಾದ ತಿಳಿಸಿದರು ಮತ್ತು ಆದಿಶ್ರೀ ರೈ ಪ್ರೇರಣಾ ಗೀತೆ ಹಾಡಿದಳು.

ವೇದಿಕೆಯಲ್ಲಿ ಶ್ರೀ ಜಗಧೀಶ್ ಬಂಗೇರ ಬೋಳೂರು ಸಿವಿಲ್ ಕಾಂಟ್ರಕ್ಟರ್, ಗಣೇಶ್ ಹೆಗ್ಡೆ ವೇಣೂರು ತಾಲೂಕು ಸಂಘ ಚಾಲಕರು, ಎಚ್.ಎಲ್ ರಾವ್ ಪ್ರಗತಿ ಪರ ಕೃಷಿಕರು, ರಾಜು ಪೂಜಾರಿ ನಿವೃತ್ತ ಶಿಕ್ಷಕರು, ಪಿ,ಡಿ,ಒ ಶಶಿದರ ಅಳದಂಗಡಿ ಗೋ ಸಂರಕ್ಷಣಾ ಸಂಘ, ಕೆ.ವೈ ಈಶ್ವರ್ ಕೃಷಿಕರು, ಶ್ರೀ ನಾರಾಯಣ ಸೋಮಾಯಾಜಿ ಅಧ್ಯಕ್ಷರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ಶ್ರೀ ವಸಂತ ಮಾಧವ ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ, ಶ್ರೀ ರಮೇಶ್ ಎನ್ ಸಹ ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ. ಹಾಗೆಯೇ ಶಾಲಾ ಮುಖ್ಯೋಪಾದ್ಯಾಯರಾದ ರವಿರಾಜ್ ಕಣಂತೂರ್ ಉಪಸ್ಥಿತರಿದ್ದರು.