Sunday, January 19, 2025
ಅಂಕಣ

‘ ಶ್ರೀ ಜನಾರ್ಧನ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 30

ಅನಂತಮಹಿಮ ಜನಾರ್ದನ|
ವಿಷ್ಣುಮೂರ್ತಿಯ ಪ್ರಿಯವದನ||
ಮೋಹನ ನಿವನು ಅನಂತಶಯನ|
ಕಾಮಿತ ಫಲವೀವ ಹರಿಚರಣ||೧||

ಸರಸಿಜನಿವನು ಶ್ರೀ ಕಾಂತ|
ಈ ಧರೆಗಿಳಿದಿಹ ಭಗವಂತ|
ಕಮಲಜನಾಭ ಪರಮ ಪವಿತ್ರ |
ಆಲಯದೊಳಗೆ ನೆಲೆನಿಂತ ||೨||

ಜಾಹೀರಾತು
ಜಾಹೀರಾತು
ಜಾಹೀರಾತು

ದೇಗುಲವಿರುತಿಹ ನೆಲೆಯಲ್ಲಿ|
ಸೇರಿಹೋಗಿದೆ ಇತಿಹಾಸದಲಿ||
ಮಂಗಳ ಮಂಜುಳ ನಾದದಲಿ|
ಸುಲಲಿತ ಸುಮನಸ ನಂದನವಿಲ್ಲಿ||೩||

ಜಾಹೀರಾತು
ಜಾಹೀರಾತು
ಜಾಹೀರಾತು

ತುಳಸೀ ದಳವ ಅರ್ಪಿಸೆ ನಿನಗೆ|
ಕಷ್ಟಗಳೆಲ್ಲವು ಅತಿದೂರ||
ತುಳಸೀ ಹಾರದ ಹೂವಿನ ಸೇವೆಗೆ|
ಸಕಲ ಪಾಪದ ಪರಿಹಾರ||೪||

ಪಂಚಭಕ್ಷ್ಯಗಳ ಕೊಟ್ಟರು ಬೇಡ|
ಹಿಡಿ ಅವಲಕ್ಕಿಯೆ ಸಾಕೆಂದ||
ಹಾಲುಪಾಯಸದ ಸವಿಯು ಕೂಡ|
ಶ್ರೀ ವಾಸುದೇವ ಗೋವಿಂದ|೫||

ನಿರ್ಮಲ ಜಲವಿಹ ಕೆರೆಯಿಹುದು|
ಉಜ್ವಲ ಸೊಬಗಿನ ತೊರೆಯಹುದು||
ಶೈಲಿ ಪುರಾತನ ಅನಿಸುವುದು|
ಶ್ರೀ ಹರಿವಾರಿಧಿ‌ ಪೂಜಿತವಹುದು||೬||

ಪುಣ್ಯ ಜಲವಿದೂ ತಿಳಿಗೊಳದಾ|
ತಿಳಿಗೊಳಿಸು ತಲಿದೆ ಶುಭಮನದಾ||
ಸತ್ಯಧರ್ಮಗಳು ನಲಿನಲಿದಾಡಿ|
ಶ್ರೀ ಹರಿಕ್ಷೇತ್ರವೆ ಈ ಜಗದಿ||೭||

Leave a Response