Breaking News : ಕೊಡಗು ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅಪಘಾತ ಅಲ್ಲ, ಕೊಲೆ ; ಬಿಗ್ ಟ್ವಿಸ್ಟ್ ಆರೋಪಿಗಳನ್ನು ಬಂಧಿಸಿದ ಕೊಡಗು ಪೋಲೀಸರು – ಕಹಳೆ ನ್ಯೂಸ್
ಮಡಿಕೇರಿ : ಮಾರ್ಚ್ ೧೯ ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ ಟ್ವಿಸ್ಟ್ ಪಡೆದು ವೈನ್, ಮರಳು ಮಾಫಿಯಾ, ರಿಕ್ರೀಯೆಶನ್ ಕ್ಲಬ್ ಮಾಡಲು ಬಿಡದಕ್ಕೆ ಕೊಲೆ ಮಾಡಲಾಗಿದೆ, ಎಂದು ವಿಚಾರಣೆಯಲ್ಲಿ ತಿಳಿದುಬಂದಿದ್ದು, ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೋಲಿಸ್ ಬಂದಿಸಿದ್ದಾರೆ.
ಕಲ್ಲು ಗುಂಡಿಯ ನಿವಾಸಿ ಸಂಪತ್ ಕುಮಾರ್ (೩೪)
ಹರಿಪ್ರಸಾದ್ (೩೬) ಮಡಿಕೇರಿಯ ಜಯ( ೩೪ ) ಆರೋಪಿಗಳನ್ನು ಬಂದಿಸಲಾಗಿದ್ದು, ಈ ಬಗ್ಗೆ ಎಸ್ ಪಿ ಸುಮನ್ ಡಿ ಪಿ ಸುದ್ದಿ ಗೋಷ್ಟಿ ಮೂಲಕ ತಿಳಿಸಿದ್ದಾರೆ.
* ಮಾರ್ಚ್ ೧೯ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ
* ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ
* ಮೂವರು ಆರೋಪಿಗಳನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರು
* ಅವರ ಚಿಕ್ಕಪ್ಪ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ
* ಮೂರು ಗುಮಾನಿ ವ್ಯಕ್ತಿಗಳಾದ ಸಂಪತ್ ಕುಮಾರ್(೩೪), ಹರಿಪ್ರಸಾದ್(೩೬), ಜಯ(೩೪)
* ಬೆಳಗ್ಗೆ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹತ್ಯೆ ನಡೆಸಿರುವುದು ಬೆಳಕಿಗೆ
* ಅಪಘಾತದ ಮಾದರಿಯಲ್ಲಿ ಅವರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ
* ಅವರ ನಡುವಿನ ವೈಯಕ್ತಿಕ ವಿಚಾರಕ್ಕೆ ಅಸಮಧಾನ ಇದ್ದ ಕಾರಣ ಕೃತ್ಯ
* ಸಂಪತ್ ವೈನ್ ಶಾಪ್‌ಗೆ ಅನುಮತಿ ಪಡೆಯಲು ಹೋದಾಗ ಕಳಗಿ ವಿರೋಧ
* ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದ ಕಳಗಿ
* ಈ ಹಿನ್ನಲೆ ೧ ತಿಂಗಳಿನಿಂದ ಪ್ಲಾನ್ ಮಾಡಿ ಅಪಘಾತದ ರೂಪದಲ್ಲಿ ಕೃತ್ಯ
* ಅವರು ಕೊಯನಾಡಿನಲ್ಲಿ ಹೊರಟಿದ್ದನ್ನು ಗಮನಿಸಿ ಕಾದು ಕುಳಿತು ಲಾರಿ ಹತ್ತಿಸಿ ಹತ್ಯೆ
* ಜಯನ ವಾಹನ ಅಪಘಾತವಾದಾಗ ಬಿಡಿಸಿಕೊಟ್ಟಿದ್ದ ಸಂಪತ್
* ಹತ್ಯೆ ಮಾಡಿದ್ರೆ ೧.೫ ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡ್ತೀನಿ ಅಂತ ಸಂಪನ್‌ನಿಂದ ಸುಪಾರಿ
* ಹರಿಪ್ರಸಾದ್ ಸ್ವಿಫ್ಟ್ ಕಾರು, ಅಪಘಾತದ ಲಾರಿ ವಶಕ್ಕೆ ಪಡೆಯಲಾಗಿದೆ
* ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ