Monday, January 20, 2025
ಸುದ್ದಿ

ತಂದೆಯ ನಿಲುವಿಗೆ ಭೇಶ್ ಎಂದ ಬಾಲಿವುಡ್ ತಾರೆ – ಕಹಳೆ ನ್ಯೂಸ್

“ತಂದೆ ಈ ಕೆಲಸವನ್ನು ಹಿಂದೆಯೇ ಮಾಡಬೇಕಿತ್ತು, ಅವರಿಗೆ ಸಿಗಬೇಕಾದ ಗೌರವ ಅಲ್ಲಿ ಸಿಗುತ್ತಿರಲಿಲ್ಲ; ಆದ್ದರಿಂದ ಹಿಂದೆಯೇ ಪಕ್ಷ ತೊರೆಯಬೇಕಿತ್ತು” ಎಂದು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿರುವ ಸಂಸದ ಶತ್ರುಘ್ನ ಸಿನ್ಹಾ ಅವರ ಕ್ರಮವನ್ನು ಪುತ್ರಿ ಹಾಗೂ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಸೋನಾಕ್ಷಿ ಸಿನ್ಹಾ ತಂದೆಯ ನಿಲುವಿಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡುವ ಮೂಲಕ ಬಿಜೆಪಿ ಸಂಸದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ಕಾಂಗ್ರೆಸ್ ಸೇರ್ಪಡೆ ಖಚಿತಪಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನ್ಹಾ ಅವರು ಎಪ್ರಿಲ್ 6 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಕ್ತಿಸಿನ್ಹ ಗೋಹಿಲ್ ಟ್ವೀಟ್ ಮಾಡಿದ್ದಾರೆ. ಪಾಟ್ನಾಸಾಹಿಬ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಶತ್ರುಘ್ನ ಸಿನ್ಹಾ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರಾಗಿದ್ದರು. ಈ ಬಾರಿ ಪಟ್ನಾಸಾಹಿಬ್ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.