” ಚಂಡಮಾರುತ “
ಸಮಯವಲ್ಲದ ಸಮಯಕ್ಕೆ
ಮಳೆ ಬರುವುದು ಪ್ರಕೃತಿಯಲಿ
ಸಮಯವಿಲ್ಲದ ಸಮಯಕ್ಕೆ
ದುಃಖದಾ ಕಣ್ಣೀರು ಬರುವುದು ಎನ್ನಲಿ
||ಸಮಯ||
ಮರವ ಕಡಿದು ಮಾರ ಹೋರಟು
ಪ್ರಕೃತಿ ನಾಶ ಮಾಡಲು
ನಿಮಗೆ ಇಂದು ಇಂಥ ಮಳೆಯು
ಧರೆಗೆ ಇಳಿದು ಚಿಮ್ಮಲು
||ಸಮಯ||
ಎನ್ನ ಮನವನು ಕಡಿಯ ಹೊರಟ
ನಿಮ್ಮ ನಾನು ಬರೆಯಲು
ಅದಕೆ ಇಂದು ಇಂಥ ಕೋಪ
ಕಣ್ಣೀರ ಕಥೆಯ ಹೇಳಲು
||ಸಮಯ||
ಮೌನದಿಂದ ನಿಂತ ಪ್ರಕೃತಿ
ಎಲ್ಲ ನುಂಗಿ ಕೂರಲು
ನುಂಗಿ ಕೂತು ಕೊನೆಗೆ ಒಮ್ಮೆ
ತನ್ನ ಕೋಪ ಕಾರಲು
||ಸಮಯ||
ಎನ್ನ ಮೌನವ ಬಳಲಿಸಿಕೊಂಡ
ನಿಮಗೆ ನಾನು ಹೇಳಲು
ಅದಕೆ ನಾನು ದುಃಖದಿಂದ
ಕೋಪಗೊಂಡು ಕೂಗಲು