ಪುಲ್ವಾಮಾ ಉಗ್ರ ದಾಳಿಯಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕೈವಾಡವಿರುವುದನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ನಿಧಾನಿಸುತ್ತಿದೆ ಎಂದಿರುವ ಭಾರತ ಗಡಿಯುದ್ದದ ಭಯೋತ್ಪಾದನೆ ಕುರಿತ ಪಾಕಿಸ್ತಾನದ ಪ್ರತಿಕ್ರಿಯೆಯಿಂದ ನಿರಾಶವಾಗಿರುವುದಾಗಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪುಲ್ವಾಮಾ ಉಗ್ರರ ದಾಳಿಯಲ್ಲಿ ಜೆಇಎಂ ಪಾತ್ರ ಹಾಗೂ ಭಾರತ ನಡೆಸಿದ್ದ ವಾಯುದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಶಿಬಿರಗಳು ನಾಶವಾಗಿರುವುದಕ್ಕೆ ಹೆಚ್ಚಿನ ಮಾಹಿತಿ ಮತ್ತು ಪುರಾವೆಗಳನ್ನು ದೆಹಲಿ ನೀಡಬೇಕಿದೆ ಎಂದು ಪಾಕಿಸ್ತಾನ ಕೇಳಿದ್ದ ಒಂದು ದಿನದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳು ಮತ್ತು ಪುಲ್ವಾಮಾ ದಾಳಿಯಲ್ಲಿ ಜೆಇಎಂ ಉಗ್ರ ಸಂಘಟನೆ ಪಾತ್ರ ಬಗೆಗಿನ ನಮ್ಮ ವಿವರವಾದ ದಾಖಲೆಗಳನ್ನು ನೋಡಿಯೂ ಪಾಕಿಸ್ತಾನ ಈ ರೀತಿ ಪ್ರತಿಕ್ರಿಯಿಸಿರುವುದು ನಮಗೆ ನಿರಾಸೆ ತಂದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲಿರುವುದು ಅತ್ಯಂತ ನಿಖರ ಸಂಗತಿ. ಇದನ್ನು ಪಾಕ್ ಸಚಿವರೇ ಮಾಧ್ಯಮದ ಎದುರೆ ಒಪ್ಪಿಕೊಂಡಿದ್ದಾರೆ ಆದರೂ ಸಾಕಷ್ಟು ಕ್ರಮಬದ್ಧವಾದ ಮಾಹಿತಿಯ ಕೊರತೆ ಮತ್ತು ಬೇಕಾದಷ್ಟು ಸಾಕ್ಷ್ಯಾಧಾರವಿಲ್ಲ ಎನ್ನುವ ಮೂಲಕ ಪಾಕಿಸ್ತಾನ ತನ್ನ ನಾಟಕವನ್ನು ಮುಂದುವರಿಸಿದೆ ಎಂದು ಕುಮಾರ್ ಹೇಳಿದ್ದಾರೆ.