Tuesday, January 21, 2025
ರಾಜಕೀಯಸುದ್ದಿ

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಗೆಲುವಿಗಾಗಿ ಉರುಳು ಸೇವೆ ಮಾಡಿದ ಅಭಿಮಾನಿ – ಕಹಳೆ ನ್ಯೂಸ್

ಮಂಡ್ಯ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರ್ತಿದೆ. ಒಂದ್ಕಡೆ ಸುಮಲತಾ ಪ್ರಚಾರದ ಅಬ್ಬರ ಜೋರಾಗಿದ್ರೆ, ಮತ್ತೊಂದೆಡೆ ನಿಖಿಲ್‍ ಪರ ಕಾಂಗ್ರೆಸ್‍-ಜೆಡಿಎಸ್‍ ನಾಯಕರು ಪ್ರಚಾರ ಮಾಡ್ತಿದ್ದಾರೆ.

ಈ ಮಧ್ಯೆ ಅಭಿಮಾನಿಯೊಬ್ಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಗೆಲುವಿಗಾಗಿ ಉರುಳು ಸೇವೆ ಮಾಡಿದ್ದಾನೆ. ಮಂಡ್ಯದ ಬೆನಕಪ್ರಸಾದ್ ಎಂಬ ಯುವಕ ರೆಬಲ್ ಸ್ಟಾರ್ ಅಂಬರೀಷ್ ಅವರ ಪಕ್ಕಾ ಅಭಿಮಾನಿ. ಹೀಗಾಗಿ ಅಂಬಿ ಪತ್ನಿ ಸುಮಲತಾ ಚುನಾವಣೆಯಲ್ಲಿ ಗೆಲ್ಲಬೇಕು ಅಂತಾ ಉರುಳುಸೇವೆ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆನಕಪ್ರಸಾದ್‍ ಬೆಳಗಿನ ಜಾವ 2 ಗಂಟೆಗೆ ಎದ್ದು, ಕೆ.ಆರ್. ನಗರದಲ್ಲಿರುವ ಆಂಜನೇಯ ಬ್ಲಾಕ್‍ ನ ಆಂಜನೇಯಸ್ವಾಮಿ ದೇವಾಲಯದಿಂದ, ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೂ ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು