ಗಡಿಯುದ್ದಕ್ಕೂ ಸಮರ ಸದೃಶ ವಾತಾವರಣ : ಪರಿಸ್ಥಿತಿ ನಿಭಾಯಿಸಲು ಸರ್ವ ಸನ್ನದ್ಧರಾದ ಭಾರತೀಯ ಯೋಧರು – ಕಹಳೆ ನ್ಯೂಸ್
ಕಣಿವೆ ರಾಜ್ಯ ಕಾಶ್ಮೀರದ ಪುಲ್ಮಾಮಾದಲ್ಲಿ ಫೆ.14 ರಂದು ಭಯೋತ್ಪಾದಕರು ದಾಳಿ ನಡೆಸಿ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರ ನರಮೇದ ನಡೆಸಿದ್ದರು. ಈ ಅಮಾನುಷ ಕೃತ್ಯಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು, ಅದಾದ 12 ದಿನಗಳ ಬಳಿಕ ಫೆ.24 ರಂದು ಭಾರತೀಯ ವಾಯು ಪಡೆದ ಮಾಣಗಳು ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಪ್ರದೇಶಕ್ಕೆ ನುಗ್ಗೆ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ 250 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆ ಬಡಿದಿದ್ದವು.
ಅದಾದ ಮರು ದಿನ ಪಾಕಿಸ್ತಾನದ ಎಫ್-16 ಫೈರ‍್ಜೆಟ್ಗಳು ಭಾರತದ ಗಡಿ ಪ್ರದೇಶದಲ್ಲಿ ದಾಳಿ ಫಲಯತ್ನ ನಡೆಸಿದ್ದರು. ಈ ಘಟನೆಗಳ ನಂತರ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟು ಯುದ್ಧದ ಕಾರ್ಮೋಡ ದಟ್ಟವಾಗಿತ್ತು.
ಇದೀಗ ಪಾಕಿಸ್ತಾನ ಮತ್ತೆ ಭಾರತವನ್ನ ಕೆಣಕಲು ಮುಂದಾಗಿದೆ. ಪಾಕಿಸ್ತಾನವು ತನ್ನ ಗಡಿ ಪ್ರದೇಶದ ಗ್ರಾಮಗಳಿಂದ ಜನರನ್ನು ತೆರವುಗೊಳಿಸಿ ಇಂಡೋ-ಪಾಕ್ ಪ್ರದೇಶದಲ್ಲಿ ಭಾರೀ ಸಂಖ್ಯೆಯ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸಮರ ಸದೃಶ ವಾತಾವರಣ ನಿರ್ಮಾಣವಾಗಿದೆ. ಭಾರತೀಯ ಸೇನೆ ಮತ್ತು ಸಮರಾಸ್ತ್ರಗಳು ಭಾರೀ ಸಂಖ್ಯೆಯಲ್ಲಿ ನಿಯೋಜನೆಯಾಗಿದ್ದು, ಪಾಕಿಸ್ತಾನ ಸೇನೆಯಿಂದ ಎದುರಾಗಬಹುದಾದ ಯಾವುದೇ ಪರಿಸ್ಥಿತಿ ನಿಭಾಯಿಸಲು ಭಾರತೀಯ ಯೋಧರು ಸರ್ವ ಸನ್ನದ್ಧರಾಗಿದ್ದಾರೆ.
ರಾಜಸ್ತಾನದ ಅಬೊಹರ್ ಹಾಗೂ ಪಂಜಾಬ್ನ ಬಿಕನೇರ್ ಮತ್ತು ಬರ್ಮರ್ ಪ್ರದೇಶಗಳ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನೆ ಮಿಲಿಟರಿ ಟ್ಯಾಂಕುಗಳು ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕ್ರೋಢೀಕರಿಸಿ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಿದೆ.
ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಝಾನ್ಸಿ ಮತ್ತು ಕಾನ್ಪುರದಿಂದ ಯುದ್ಧ ಟ್ಯಾಂಕ್ಗಳು ಮತ್ತು ಆರ್ಟಿಲರಿ ಗನ್ಗಳನ್ನು ಕಳೆದ ಎರಡು ದಿನಗಳಿಂದ ಮುಂಚೂಣಿ ನೆಲೆಗಳತ್ತ ರವಾನಿಸಲಾಗುತ್ತಿದೆ.
ಪಾಕಿಸ್ತಾನವು ಅಮೃತಸರ ಮತ್ತು ಸಂಬಾ ವಲಯಗಳಲ್ಲಿನ ಸೂಕ್ಷ್ಮ ಪ್ರದೇಶಗಳ ಬಳಿ ತನ್ನ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ಅದೇ ರೀತಿ ಕ್ರಮ ಅನುಸರಿಸಿದೆ.