Recent Posts

Sunday, January 19, 2025
ಸುದ್ದಿ

ಎರಡನೇ ಹಂತದ ‘ಸ್ವಚ್ಛ ಪುತ್ತೂರು’ ಅಭಿಯಾನದ ಪೂರ್ವಭಾವಿ ಸಭೆ | ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಭಾಗಿ

ಪುತ್ತೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಸ್ವಚ್ಛ ಪುತ್ತೂರು ಅಭಿನಾಯನವು ನಡೆದಿತ್ತು. ಈಗ ಎರಡನೇ ವರ್ಷದ ಸ್ವಚ್ಛ ಪುತ್ತೂರು ಅಭಿಯಾನದ ಪೂರ್ವಭಾವಿ ಸಭೆಯು ಇಂದು ಕಲ್ಲಾರೆ ರಾಘವೇಂದ್ರ ಮಠದಲ್ಲಿ ರಾಮಕೃಷ್ಣ ಮಠದ ಪೂಜ್ಯ ಏಕಗಮ್ಯಾನಂದಜೀ ಮಹರಾಜ್ ಅವರ ನೇತೃತ್ವದಲ್ಲಿ ನಡೆಯಿತು.

ಸ್ವಚ್ಛ ಮನಸು, ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ ಪ್ರಾಮುಖ್ಯತೆ, ಅಭಿಯಾನದ ಸ್ವರೂಪ, ಕಾರ್ಯಯೋಜನೆಗಳ ಕುರಿತು ಏಕಗಮ್ಯಾನಂದ ಜೀ ಮಾರ್ಗದರ್ಶನ ಮಾಡಿದರು. ಡಿ. 3 ರಂದು ಸ್ವಚ್ಚತಾ ಅಭಿಯಾನಕ್ಕೆ ಪುತ್ತೂರಿನಲ್ಲಿ ಚಾಲನೆ ಲಭಿಸಲಿದೆ. ಕಾರ್ಯಕ್ರಮದಲ್ಲಿ ಸ್ವಚ್ಛ ಪುತ್ತೂರಿನ ಸಂಯೋಜಕ ಶ್ರೀಕೃಷ್ಣಉಪಾಧ್ಯಾಯ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ನೂರಕ್ಕು ಅಧಿಕ ಪುತ್ತೂರಿನ ನಾಗರಿಕರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಸಹಜ್ ರೈ, ಜೋಹರಾ ನಿಸಾರ, ಹರಿಣಿ ಪುತ್ತೂರಾಯ, ರಾಜೇಶ್ ಬನ್ನೂರು, ಶಶಿಧರ ಕಜೆ, ರಾಜೇಶ್ ಬಿಜ್ಜಂಗಳ, ಗೋಕುಲ್ ನಾಥ್, ಜಯಾನಂದ ಕೊಡಂಗೆ, ಶಿವಶಂಕರ ಭಟ್ , ಸುರೇಶ್, ಗಿರೀಶ್, ದಿನೇಶ್ ಜೈನ್, ವಿನೋದ್, ಯು.ಪಿ. ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

Leave a Response