Sunday, November 24, 2024
ಸುದ್ದಿ

ನಾಳೆ ಹೊಸ ವಿಕ್ರಮಕ್ಕೆ ಇಸ್ರೋ ಸಜ್ಜು, ಪಿಎಸ್‌ಎಲ್-ಸಿ೪೫ ಉಡಾವಣೆಗೆ ಕ್ಷಣಗಣನೆ –ಕಹಳೆ ನ್ಯೂಸ್

ಅಂತರಿಕ್ಷದಲ್ಲಿ ಸೆಂಚುರಿ ಸೇರಿದಂತೆ ಹೊಸ ವಿಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ತಲೆಎತ್ತಿ ನಿಂತಿದೆ. ನಾಳೆ ಪಿಎಸ್‌ಎಲ್ -ಸಿ೪೫ ಗಗನ ನೌಕೆಯನ್ನು ಉಡಾವಣೆ ಮಾಡಲಿದೆ.

ಮೂರು ಭಿನ್ನ ಕಕ್ಷೆಗಳಲ್ಲಿ ೩೦ ಉಪಗ್ರಹಗಳನ್ನು ಸೇರಿಸುವ ವಿಶ್ವದ ಪ್ರಪ್ರಥಮ ಪ್ರಯೋಗ ಇದಾಗಿದೆ. ಪಿಎಸ್ಎಲ್-ಸಿ೪೫ ಮೂಲಕ ಒಟ್ಟು ೩೦ ಉಪಗ್ರಹಗಳು ನಭಕ್ಕೆ ಚಿಮ್ಮಲಿದೆ. ಸುಧಾರಿತ ವಿದ್ಯುನ್ಮಾನ ಬೇಹುಗಾರಿಕೆ ಉಪಗ್ರಹ -ಎಮಿಸ್ಯಾಟ್ ಸೇರಿದಂತೆ ಇತರ ೩೦ ವಾಣಿಜ್ಯ ಉಪಗ್ರಹಗಳು ಉಡ್ಡಯನವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲೆಕ್ಟ್ರಾನಿಕ್ ಸ್ಪೈ ಸ್ಯಾಟಲೈಟ್‌ನ್ನು ಭಾರತ ರಕ್ಷಣಾ ಇಲಾಖೆಯ ಮುಖ್ಯ ಅಂಗ ಸಂಸ್ಥೆಯಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಾಗಿ ವಿಶೇಷವಾಗಿ ನಿರ್ಮಿಸಲಾಗಿದೆ. ಇದು ಅಂತರಿಕ್ಷದಿಂದ ಶತ್ರು ವೈರಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣು ಎಂದು ಬಣ್ಣಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು