ಮಂಗಳೂರು: ತುಳುನಾಡಿನ ಹೆಮ್ಮೆಯಾಗಿದ್ದ ವಿಜಯಾ ಬ್ಯಾಂಕ್ ನಾಳೆಯಿಂದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳ್ಳಲಿದೆ. ದೇಶಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿದ್ದ ವಿಜಯಾ ಬ್ಯಾಂಕ್ ತುಳುನಾಡಿಗೆ ಕಿರೀಟವಾಗಿತ್ತು ಆದರೆ ಇದು ಇನ್ನುಮುಂದೆ ಇತಿಹಾಸ ಪುಟ ಸೇರಲಿದೆ.
ವಿಜಯಾ ಬ್ಯಾಂಕ್‌ನಲ್ಲಿರುವ ಎಲ್ಲ ಖಾತೆಗಳು ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಏಪ್ರಿಲ್ ಒಂದರ ನಂತರ ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾವಣೆಯಾಗಲಿದೆ. ಇದರಿಂದ ಬ್ಯಾಂಕ್ ಆಫ್ ಬರೋಡಾ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.