Recent Posts

Tuesday, January 21, 2025
ಸುದ್ದಿ

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸಿಬ್ಬಂದಿ ರಾಮಚಂದ್ರ ಗೌಡ ಸ್ವಯಂ ನಿವೃತ್ತಿ – ಕಹಳೆ ನ್ಯೂಸ್

ಕಡಬ : ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸಿಬ್ಬಂದಿ ರಾಮಚಂದ್ರ ಗೌಡ ಮಾ.31 ರಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ.

ಇವರು 1984ರಲ್ಲಿ ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪ್ರಥಮವಾಗಿ ಸೇವೆ ಸಲ್ಲಿಸಿ ನಂತರ ಸಂಘದ ಮಾರಾಟ ವಿಭಾಗ, ಸಂಘದ ನೂಜಿಬಾಳ್ತಿಲ ಶಾಖೆ, ಮರ್ದಾಳ ಶಾಖೆಯಲ್ಲಿ ಗುಮಸ್ತರಾಗಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿ ಕಡಬ ಪ್ರಧಾನ ಕಛೇರಿಯಲ್ಲಿ ಮಾ.31ರಂದು ಸ್ವಯಂ ನಿವೃತ್ತಿ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಬಲ್ಯ ಗ್ರಾಮದ ದೇರಾಜೆ ಸನಿಲ ನಿವಾಸಿ ನಿವೃತ್ತಿ ಶಿಕ್ಷಕ ಕೃಷ್ಣಪ್ಪ ಗೌಡ ಮತ್ತು ಜಾನಕಿ ದಂಪತಿಗಳ ದ್ವಿತೀಯ ಪುತ್ರರಾಗಿದ್ದು ಇವರ ಪತ್ನಿ ಲೀಲಾವತಿ ಮಕ್ಕಳಾದ ರತನ್ ಕುಮಾರ್, ನಿತಿನ್ ಕುಮಾರ್‍ರೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು