Monday, January 20, 2025
ಸುದ್ದಿ

ಲೋಕಸಭಾ ಚುನಾವಣೆ ಪ್ರಕಟವಾಗುತ್ತಿದ್ದಂತೆ ಅಕ್ರಮವಾಗಿ ಸಾಗಿಸುತ್ತಿದ್ದ 1.21 ಕೋಟಿ ಹಣ ವಶ: ವಿನೋತ್ ಪ್ರಿಯಾ – ಕಹಳೆ ನ್ಯೂಸ್

ಚಿತ್ರದುರ್ಗ: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಜಿಲ್ಲೆಯಲ್ಲಿ ಎಷ್ಟು ಹಣ ಸಿಕ್ಕಿದೆ ಅಂದ್ರೆ . 1.21 ಕೋಟಿ ಹಣ ವಶವಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಹಣ, ಸಾಮಗ್ರಿ ಇತ್ಯಾದಿಗಳ ಸಾಗಣೆ ಕುರಿತು ನಿಗಾ ವಹಿಸಲು ಜಿಲ್ಲೆಯಲ್ಲಿ 40 ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ, ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತಿದೆ. ಕಳೆದ ಮಾ. 15 ರಂದು ಹೊಸದುರ್ಗ ಅಹಮದ್ ನಗರ ಚೆಕ್‍ಪೋಸ್ಟ್‍ನಲ್ಲಿ 50 ಲಕ್ಷ, ಮಾ. 22 ರಂದು ಬೊಗಳೇರಹಟ್ಟಿಯಲ್ಲಿ 1 ಲಕ್ಷ ಹಾಗೂ ಮಾ. 29 ರಂದು ಕೆಳಗಳಹಟ್ಟಿಯಲ್ಲಿ 70 ಲಕ್ಷ ರೂ. ವಶ ಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈವರೆಗೆ ಜಿಲ್ಲೆಯಲ್ಲಿ 1. 21 ಕೋಟಿ ರೂ. ಗಳ ನಗದು ವಶಪಡಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆಗೆ ಪರಿಶೀಲನೆಗಾಗಿ ಶಿಫಾರಸು ಮಾಡಲಾಗಿದೆ. ಅಲ್ಲದೆ ಅಕ್ರಮ ಮದ್ಯ ಸಾಗಣೆ ಕುರಿತು ಅಬಕಾರಿ ಇಲಾಖೆ ಎಲ್ಲೆಡೆ ನಿಗಾ ವಹಿಸುತ್ತಿದ್ದು, ದಾಳಿ ಪ್ರಕರಣಗಳನ್ನು ಹೆಚ್ಚಿಸಲಾಗಿದೆ. ಈವರೆಗೆ ಸುಮಾರು 59 ಲಕ್ಷ ಮೌಲ್ಯದ 10143 ಲೀ. ಅಕ್ರಮ ಮದ್ಯ ವಶಕ್ಕೆ ಪಡೆದಿದ್ದು, ಅಬಕಾರಿ ಇಲಾಖೆ 318 ಪ್ರಕರಣ ದಾಖಲಿಸಿದ್ದರೆ, ಪೊಲೀಸ್ ಇಲಾಖೆ 49 ಪ್ರಕರಣಗಳನ್ನು ದಾಖಲಿಸಿದೆ. ಸುಮಾರು 1 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು