Monday, January 20, 2025
ಸುದ್ದಿ

CRPF ವಾಹನಗಳ ಮೇಲೆ ಪುಲ್ವಾಮ ಮಾದರಿಯ ದಾಳಿಗೆ ಪ್ರಯತ್ನ: ಹಿಜ್ಬುಲ್‌ ಉಗ್ರ ಸೆರೆ – ಕಹಳೆ ನ್ಯೂಸ್

ನವದೆಹಲಿ: ಶನಿವಾರದಂದು ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ CRPF ವಾಹನಗಳ ಮೇಲೆ ಪುಲ್ವಾಮ ಮಾದರಿಯಲ್ಲೇ ಕಾರ್‌ ಬಾಂಬ್‌ ಸ್ಪೋಟಿಸಿ ದಾಳಿ ಮಾಡುವ ಪ್ರಯತ್ನದಲ್ಲಿ ವಿಫ‌ಲಗೊಂಡಿದ್ದ ಕಾರು ಚಾಲಕನನ್ನು ಇಂದು ಬಂಧಿಸುವಲ್ಲಿ ಸಫ‌ಲವಾಗಿರುವ ಪೊಲೀಸರು ಇದೀಗ ಆ ಶಂಕಿತ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತನ ಬಳಿ ಸಿಕ್ಕಿರುವ ಚಿಟಿಯೊಂದರ ಆಧಾರದಲ್ಲಿ ಆತ ಹಿಜ್ಬುಲ್‌ ಉಗ್ರ ಸಂಘಟನೆಗೆ ಸೇರಿರುವ ವ್ಯಕ್ತಿ ಎಂದು ತಿಳಿದುಬಂದಿದೆ ಮಾತ್ರವಲ್ಲದೇ ಆತ ಫೆಬ್ರವರಿ 14ರ ಮಾದರಿಯ ದಾಳಿಯನ್ನು ನಡೆಸಲು ಯೋಜಿಸಿದ್ದ ಎಂಬ ಮಾಹಿತಿಯೂ ಅದರಲ್ಲಿತ್ತು ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರದ ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಎಲ್‌.ಪಿ.ಜಿ. ಸಿಲಿಂಡರ್‌ ಗಳು, ಪೆಟ್ರೋಲ್‌ ತುಂಬಿದ್ದ ಕ್ಯಾನ್‌ ಗಳು, ಜಿಲೆಟಿನ್‌ ಕಡ್ಡಿಗಳು, ಯೂರಿಯಾ ಮತ್ತು ಸಲ್ಫರ್‌ ಮುಂತಾದ ವಸ್ತುಗಳು ದೊರಕಿದೆ.ಈ ವಸ್ತುಗಳನ್ನು ಬಳಸಿಕೊಂಡೇ ಸುಧಾರಿತ ನ್ಪೋಟಕ ಉಪಕರಣಗಳನ್ನು (IED) ತಯಾರಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್‌ 30ರಂದು ರಾಂಬನ್‌ ಜಿಲ್ಲೆಯ ತೆಥಾರ್‌ ಗ್ರಾಮದಲ್ಲಿ ಸಿ.ಆರ್‌.ಪಿ.ಎಫ್. ವಾಹನಗಳು ಸಾಗುತ್ತಿದ್ದ ಜಮ್ಮು – ಕಾಶ್ಮೀರ ಹೆದ್ದಾರಿಯಲ್ಲೇ ಜವಾಹರ್‌ ಸುರಂಗದ ಪಕ್ಕದಲ್ಲೇ ಕಾರೊಂದರಲ್ಲಿ ನಿಗೂಢ ನ್ಪೋಟ ಸಂಭವಿಸಿತ್ತು. ನ್ಪೋಟ ನಡೆದ ತಕ್ಷಣ ಕಾರಿನ ಚಾಲಕ ಘಟನಾ ಸ್ಥಳದಲ್ಲಿ ಕಾರನ್ನು ಬಿಟ್ಟು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

ಘಟನೆ ನಡೆದ ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಪಡೆಗಳು ಕಾರಿನ ಚಾಲಕನಿಗಾಗಿ ಭಾರೀ ಶೋಧ ಕಾರ್ಯವನ್ನು ಕೈಗೊಂಡಿದ್ದವು. ಇದೀಗ ಈ ಘಟನೆ ನಡೆದ ಎರಡು ದಿನಗಳ ಬಳಿಕ ಇಂದು ಶಂಕಿತ ವ್ಯಕ್ತಿಯನ್ನು ಬಂಧಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಮತ್ತು ಶನಿವಾರದ ಹೆದ್ದಾರಿ ಕಾರು ನ್ಪೋಟದಲ್ಲಿ ಆತನ ಪಾತ್ರದ ಕುರಿತಾಗಿ ವಿಚಾರಣೆಯನ್ನು ನಡೆಸಲಾಗುತ್ತಿದೆ.