Recent Posts

Monday, January 20, 2025
ಸುದ್ದಿ

ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಶಿಬಿರಕ್ಕೆ ಚಾಲನೆ – ಕಹಳೆ ನ್ಯೂಸ್

ಸುಳ್ಯ ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆ 10 ದಿನಗಳ ಬೇಸಿಗೆ ಶಿಬಿರ ಪ್ರಾರಂಭವಾಗಿದ್ದು ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಶಿಬಿರ ಕ್ಕೆ ಚಾಲನೆ ನೀಡಿದರು. ಇದರ ಸಭಾ ಕಾರ್ಯಕ್ರಮ ಜ್ಞಾನ ಗಂಗಾ ಶಾಲಾ ಆವರಣದಲ್ಲಿ ನಡೆಯಿತು, ವಿದ್ಯಾ ಸಂಸ್ಥೆ ಸಂಚಾಲಕರಾದ ಎಂ ಪಿ ಉಮೇಶ್ ಸ್ವಾಗತಿ, ನಮ್ಮ ಭಾಗದ ಮಕ್ಕಳು ರೈತಾಪಿ ವರ್ಗದವರ ಮಕ್ಕಳು , ಸಹಜವಾಗಿ ಕೃಷಿ ನಮ್ಮ ಆಸಕ್ತಿ ಹಾಗು ವೃತ್ತಿಪರವು ಕೂಡ ಇಂತಹ ಸಂದರ್ಭಗಳಲ್ಲಿ ಮಕ್ಕಳು ಬೇಸಿಗೆ ಶಿಬಿರದ ಮೂಲಕ ಮಕ್ಕಳ ಸುಪ್ತ ಪ್ರತಿಭೆಗಳು ಅನಾವರಣ ವಾಗಲಿ ಈ ಮೂಲಕ ಮಕ್ಕಳ ಬದ್ದುಕಿನಲ್ಲಿ ಹೊಸ ಬದಲಾವಣೆಗಳಾಗಲಿ, ಅಂತೆಯೆ ನಮ್ಮೆಲ್ಲರಿಗೆ ಸ್ಪೂರ್ತಿ ಸಾಲುಮರದ ತಿಮ್ಮಕ್ಕರವರು ಎಂದರು, ಸಭೆಯಲ್ಲಿ ಪುಟ್ಟಣ್ಣ, ಗಂಗಮ್ಮ, ಗೀತಾಮೊಂಟಡ್ಕ ಸೇರಿದಂತೆ ವಿವಿದ ಗಣ್ಯರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕರವರನ್ನು ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತಾಡಿದ ತಿಮ್ಮಕ್ಕರವರು, ನಾವು 25 ವರುಷ ಮಕ್ಕಳು ಇಲ್ದೆ ಕೊರಗಿದವರು, ಮಕ್ಕಳಂತೆ ಮರಗಳನ್ನು ಬೆಳೆಸಿದೆವು, ಅಂದಿನ ಕಾಲದಲ್ಲಿ ನಾನು ಮತ್ತು ನನ್ನ ಪತಿ ಹಸು ಗಳನ್ನು ಮೇಯಲು ಬಿಟ್ಟು, ಗಿಡನೆಟ್ಟೆವು, ಕುಂಬಾರ ರಿಂದ ಮಡಕೆ ತಂದು ನೀರು ಹಾಕಿದೆವು ವರ್ಷಕ್ಕೆ 10 15 ಗಿಡ ಬದುಕುತ್ತಿದ್ದವು ಹೀಗೆ 70 ವರ್ಷ ಗಿಡ ನೆಡುತ್ತಾ ಬಂದೆವು , ಮುಂದೆಯೂ ಮರಗಳನ್ನು ಕಡಿಯಬೇಡಿ ಜನರಿಗೆ ನೆರಳಾಗಲಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು